Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬೇಡ್ಕರ್ ಆಪತ್ಬಾಂಧವ ಸಂಘಟನೆ ವತಿಯಿಂದ ಇಪ್ಪತ್ತನೇ ಸರಳ ವಿವಾಹ-ಕಹಳೆ ನ್ಯೂಸ್

ಪುತ್ತೂರು ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅಂತರ್ಜಾತಿ ಪ್ರೇಮಿಗಳಿಗೆ ಹುಡುಗನ ಕಡೆಯಿಂದ ಆಕ್ಷೇಪ ಇದ್ದುದರಿಂದ ಕಂಕಣ ಭಾಗ್ಯ ಒದಗಿಸಿದ ಸ್ಥಾಪಕ ಜಿಲ್ಲಾ ಅಧ್ಯಕ್ಷ ರಾಜು ಹೊಸಮಠ ಇವರ ನೇತೃತ್ವದಲ್ಲಿ 1/5/2024 ರಂದು ಪುತ್ತೂರು ಶ್ರೀ ಲಕ್ಷ್ಮಿ ಹೋಟೆಲ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಆನಂದ ಕೌಡಿಚಾರ್ ಇವರ ಮಗಳು ಆಶಾ ಕೌಡಿಚಾರ್ ಮತ್ತು ಕಡಬ ತಾಲೂಕು ದಿವಂಗತ ಗಣೇಶ್ ಮಡಿವಾಳ ಇವರ ಪುತ್ರ ಶಶಾಂಕ್ ಅಲಂಕಾರ್ ಇವರ ಅಂತರ್ಜಾತಿ ಸರಳ ವಿವಾಹ ನಡೆಯಿತು.

ಶುಭ ವಿವಾಹದ ಮೊದಲಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ರಾಜು ಹೊಸಮಠರವರು ದೀಪ ಬೆಳಗಿಸಿ ಶುಭಹಾರೈಸಿದರು. ದಲಿತ ಮುಖಂಡರಾದ ಅಣ್ಣಿ ಎಳ್ತಿಮಾರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹಾರರ್ಪಣೆ ಮಾಡಿದರು. ಈ ವಿವಾಹ ಅಂಬೇಡ್ಕರ್ ರವರ ತತ್ವ ಸಿದ್ಧಾಂತ ಒಳಗೊಂಡು ನೆರವೇರಿತು. ನೂತನ ವಧು-ವರರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಅರ್ಪಿಸಿದರು. ಈ ಸರಳ ವಿವಾಹದಲ್ಲಿ 40ಕ್ಕೂ ಹೆಚ್ಚು ಮಂದಿ ವಧು ವರರನ್ನು ಶುಭ ಹಾರೈಸಿದರು. ಸಮಾರಂಭದಲ್ಲಿ
ಸಂಕಪ್ಪ ನಿಡ್ಪಳ್ಳಿ.ಪ್ರವೀಣ್ ಕುಮಾರ್ ಹೇಮಾಜೆ.ಲೋಕೇಶ್ ಹಿರೇಬಂಡಾಡಿ. ಪದ್ಮನಾಭ ಬಪ್ಪಳಿಗೆ. ಚಿದಾನಂದ ಕೆಯ್ಯೂರು. ವಿಠಲ ನಾಯಕ್. ಆಪತ್ಬಾಂಧವ ರಕ್ತದಾನಿ ಗ್ರೂಪ್ ಅಡ್ಮಿನ್ ಶಶಿಧರ್ ಕೆಯೂರು..ಸುರೇಶ್ ಬುಳೇರಿಕಟ್ಟೆ.ಸುಮತಿ ಭಕ್ತಕೋಡಿ. ಶ್ರೀಮತಿ ಧರಣಿ ಕೆಯ್ಯೂರು. ಇವರುಗಳು ಉಪಸ್ಥಿತರಿದ್ದು ಸಹಕರಿಸಿದರು.ವಧುವಿನ ತಂದೆ ಆನಂದ ಕೌಡಿಚಾರ್ ರವರು ಬಂದಿರುವ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಪ್ರವೀಣ್ ಕುಮಾರ್ ಹೇಮಾಜೆ ಯವರು ಭೋಜನ ಬಡಿಸುವ ವ್ಯವಸ್ಥೆಯಲ್ಲಿ ಸಹಕರಿಸಿದರು*

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು