Tuesday, January 21, 2025
ಬೆಂಗಳೂರುಸುದ್ದಿ

ಮೇ 11, 12 ರಂದು ಶ್ರೀ ಎಡನೀರು ಮಠದ ಬೆಂಗಳೂರಿನ ಕೋರಮಂಗಲದ ಶ್ರೀಕೃಷ್ಣ ದೇವಾಲಯಲ್ಲಿ 30 ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ – ಕಹಳೆ ನ್ಯೂಸ್

ಬೆಂಗಳೂರು: ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಾದದೊಂದಿಗೆ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ತಾಂತ್ರಿಕತ್ವ ಮತ್ತು ಮಾರ್ಗದರ್ಶನದಲ್ಲಿ ಶ್ರೀ ಎಡನೀರು ಮಠದ ಬೆಂಗಳೂರಿನ ಕೋರಮಂಗಲದ  ಶ್ರೀ ಕೃಷ್ಣ ದೇವಾಲಯದಲ್ಲಿ ಮೇ.11 ಮತ್ತು ಮೇ.12ರಂದು 30ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ.11ರಂದು ಪ್ರಾತಃ 7:00 ರಿಂದ : ಗಣಹೋಮ, ಪಂಚಗವ್ಯ, ಪುಣ್ಯಾಹ ಶುದ್ಧಿ, ನವಕಪ್ರಧಾನ ಕಲಶ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, 108 ನಾಳಿಕೇರ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗ ಹಾಗೂ ಸಂಜೆ 6:00 ರಿಂದ ಶ್ರೀಮತಿ ಮಧುಮಂತಿ ವರುಣ್ ಬ್ಯಾನರ್ಜಿ ಅವರ ಶಿಷ್ಠೆಯರಾದ ಕು|| ಹನ್ಸಿಕ ವಿಶ್ವಕುಮಾರ್, ಕು|| ನಿತ್ಯ ತಲ್ಲಪಾರಗಡ ಕು|| ದೀಪಾ ಪದುಮಾರು ಇವರಿಂದ “ಭರತನಾಟ್ಯ” ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇ.12ರಂದು ಪ್ರಾತಃ 7:00 ರಿಂದ : ಗಣಹೋಮ, ಚಕ್ರಾಬ್ಬ ಪೂಜೆ, ಪಂಚಾಮೃತಾಭಿಷೇಕ, ನಾಳಿಕೇರ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿನಿಯೋಗ, ರಾತ್ರಿ: ವಿಶೇಷ ಅಲಂಕಾರ ಪೂಜೆ. ಪುಷ್ಪ ರಥೋತ್ಸವ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.