Tuesday, December 3, 2024
ಕ್ರೈಮ್ಸುದ್ದಿಹಾಸನ

ಮಂಚದ ಮೇಲೆ ಮಲ್ಕೊ, ಬಟ್ಟೆ ಬಿಚ್ಚು ಅಂತ ಹೆದರಿಸಿದ್ರು ; ಪ್ರಜ್ವಲ್‌ ವಿರುದ್ಧ ಮತ್ತೊಬ್ಬ ಸಂತ್ರಸ್ತೆಯಿಂದ ದೂರು, ಮತ್ತೊಂದು ಎಫ್‌ಐಆರ್‌..!! – ಕಹಳೆ ನ್ಯೂಸ್

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ಎಫ್‌ಐಆರ್‌ ದಾಖಲಾಗಿದೆ. ಸಿಐಡಿ ಸೈಬಲ್‌ ಸೆಲ್‌ನಲ್ಲಿ ಎಸ್‌ಐಟಿ ಮುಖ್ಯಸ್ಥರ ಮುಂದೆ ಸಂತ್ರಸ್ತೆ ನೀಡಿದ್ದ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಾಗಿದೆ.

ಎಫ್ಐಆರ್ನಲ್ಲಿಏನಿದೆ?: ಸಂತ್ರಸ್ತೆ ಹಾಸನದಲ್ಲಿ ಜನಪ್ರತಿನಿಧಿ ಆಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ನೀಡಿದ ದೂರಿನಲ್ಲಿ, ಸಾರ್ವಜನಿಕರ ಕೆಲಸ ಮಾಡಿಕೊಡುವುದಕ್ಕಾಗಿ ಎಂಎಲ್‌ಎ, ಎಂಪಿ ಹತ್ತಿರ ಆಗಾಗ್ಗೆ ಹೋಗುತ್ತಿದ್ದೆ. 2021 ರಲ್ಲಿ ನನ್ನ ಕ್ಷೇತ್ರ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಸೀಟ್‌ ಕೊಡಿಸುವುದಕ್ಕೆ ಎಂಪಿ ಪ್ರಜ್ವಲ್‌ ರೇವಣ್ಣ ಹತ್ತಿರ ವಿನಂತಿ ಮಾಡಿದ್ದೆ. ಹಾಸನದ ಎಂಪಿ ಕಚೇರಿ ಹಾಗೂ ಕ್ವಾಟ್ರಸ್‌ಗೆ ಹೋಗಿದ್ದೆ. ಅಲ್ಲಿದ್ದ ಸಾರ್ವಜನಿಕರನ್ನೆಲ್ಲ ಮಾತನಾಡಿಸಿ ಕೊನೆಗೆ ನನ್ನ ಮೇಲೆ ರೂಂ ಒಳಗಡೆ ಕರೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಒಳಗೆ ಹೋದೆ. ಆಗ ಅವರು ನನ್ನ ಕೈ ಹಿಡಿದು ಎಳೆದುಕೊಂಡು ರೂಂ ಬಾಗಿಲನ್ನು ಹಾಕಿದರು. ಆಗ ನಾನು ಯಾಕೆ ಬಾಗಿಲು ಹಾಕುತ್ತಿದ್ದೀರಿ ಎಂದು ಕೇಳಿದೆ. ಆಗ ಅವರು ಏನು ಆಗಲ್ಲ ಅಂತ ನನ್ನನ್ನು ಬೆಡ್‌ ಮೇಲೆ ಕೂರಿಸಿಕೊಂಡರು. ಆಮೇಲೆ ಅವರು, ‘ನಿನ್ನ ಗಂಡ ತುಂಬಾ ಜೋರು ಸ್ವಲ್ಪ. ಕಡಿಮೆ ಮಾತನಾಡಲಿಕ್ಕೆ ಹೇಳು. ಇಲ್ಲ ಅಂದರೆ ಅವನನ್ನು ಬಿಡಲ್ಲ. ನಿನ್ನ ಗಂಡ ಬೆಳೆಯಬೇಕು ಎಂದರೆ ನಾನು ಹೇಳಿದ ಹಾಗೆ ಮಾಡು’ ಎಂದರು.

ಆಮೇಲೆ ನನ್ನನ್ನು ಮಂಚದ ಮೇಲೆ ಮಲ್ಕೊ, ಬಟ್ಟೆ ಬಿಚ್ಚು ಅಂತ ಹೇಳಿದರು. ನಾನು ಬಿಚ್ಚಲ್ಲ ಎಂದೆ. ಅವರು ಬಿಚ್ಚುವಂತೆ ಒತ್ತಾಯಿಸಿದರು. ನಾನು ಕೂಗುತ್ತೇನೆ ಎಂದು ಹೇಳಿದ್ದಕ್ಕೆ, ‘ನನ್ನ ಹತ್ತಿರ ಗನ್‌ ಇದೆ. ನಾನು ಹೇಳಿದ ಹಾಗೆ ಕೇಳಲಿಲ್ಲ ಅಂದರೆ ನಿನ್ನ ಗಂಡ ಮತ್ತು ನಿನ್ನನ್ನು ಬಿಡುವುದಿಲ್ಲ’ ಎಂದು ಬೆದರಿಸಿದರು. ನನ್ನನ್ನು ಬಲತ್ಕಾರ ಮಾಡಲು ಪ್ರಯತ್ನಿಸಿದರು. ಆಗ ನಾನು ಎಷ್ಟೇ ಬೇಡಿಕೊಂಡರೂ ಬಿಡದೇ ಬಿಗಿಯಾಗಿ ನನ್ನ ಕೈಯನ್ನು ಹಿಡಿದುಕೊಂಡರು. ಕೂಗಬೇಡ ಅಂತ ಬೆದರಿಕೆ ಹಾಕಿದರು. ಆಗ ನಾನು ಭಯಪಟ್ಟೆ. ಅವರು ಮೊಬೈಲ್‌ ತೆಗೆದರು. ನಾನು ಭಯದಿಂದ ಹೆದರಿ ಅವರು ಹೇಳಿದ ಹಾಗೆ ಕೇಳಿದೆ. ಅವರು ಹೇಳಿದಂತೆ ನಡೆದುಕೊಂಡೆ.

ಅವರು ನನ್ನನ್ನು ಬಲತ್ಕಾರ ಮಾಡುತ್ತಾ ಲೈಂಗಿಕ ದೌರ್ಜನ್ಯ ಮಾಡಿ ಅದನ್ನು ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿಕೊಂಡರು. ಆಮೇಲೆ ನೀನೇನಾದರು ಈ ವಿಚಾರವನ್ನು ಬಾಯಿಬಿಟ್ಟರೆ ನಿನ್ನ ವೀಡಿಯೋವನ್ನು ಸಾರ್ವಜನಿಕರಿಗೆ ಬಿಡುತ್ತೇನೆ. ಈ ವೀಡಿಯೋದಲ್ಲಿ ನನ್ನ ಮುಖ ಇಲ್ಲ. ನಿನ್ನದೇ ಮಾನ ಮರ್ಯಾದೆ ಹೋಗೋದು ಎಂದು ಹೇಳಿ ನನ್ನನ್ನು ಭಯಪಡಿಸಿದರು. ವೀಡಿಯೋವನ್ನು ಹೀಗೆ ಇಟ್ಟುಕೊಂಡಿರುತ್ತೇನೆ. ನಾನು ಕರೆದಾಗಲೆಲ್ಲ ನೀನು ನನ್ನ ಜೊತೆ ಮಲಗಲು ಬರಬೇಕು. ಇಲ್ಲ ಅಂದರೆ ವೀಡಿಯೋ ಬಹಿರಂಗಪಡಿಸುತ್ತೇನೆ ಎಂದು ಬ್ಲಾಕ್‌ಮೇಲ್‌ ಮಾಡಿದರು.

ನಿನ್ನ ಗಂಡ ನನ್ನ ಜೊತೆ ಇರುತ್ತಾನೆ. ಅವನನ್ನು ಮುಗಿಸುತ್ತೇನೆ ಎಂದು ನನ್ನನ್ನು ಬೆದರಿಸಿ ಭಯಪಡಿಸುತ್ತಾ ಪದೇ ಪದೇ ನನಗೆ ಫೋನ್‌ ಮಾಡುತ್ತಿದ್ದರು. ವೀಡಿಯೋ ಕಾಲ್‌ ಮಾಡಿ ನಿನ್ನ ದೇಹವನ್ನು ನಗ್ನವಾಗಿ ತೋರಿಸು. ಬಟ್ಟೆ ಬಿಚ್ಚು ಎಂದು ಪದೇ ಪದೇ ಪೀಡಿಸಿ ಮಾನಸಿಕವಾಗಿ ಹಿಂಸೆ ನೀಡಿ, ದೈಹಿಕವಾಗಿ ಅನೇಕ ಬಾರಿ ನನ್ನನ್ನು ಬಲವಂತವಾಗಿ ಬಲತ್ಕಾರ ಮಾಡಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುತ್ತಾನೆ.

ಆದ್ದರಿಂದ ಹಾಸನದ ಎಂಪಿ ಆದ ಪ್ರಜ್ವಲ್‌ ರೇವಣ್ಣ ನನ್ನನ್ನು ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಕೊಲೆ ಬೆದರಿಕೆ ಹಾಕಿ ಭಯಪಡಿಸಿ ಬಲವಂತವಾಗಿ ಬಲತ್ಕಾರ ಮಾಡುತ್ತಾ ಲೈಂಗಿಕ ದೌರ್ಜನ್ಯ ಮಾಡಿದರು. ಅದನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡು ಸಾರ್ವಜನಿಕವಾಗಿ ಬಹಿರಂಗ ಮಾಡಿ ನನ್ನ ಮಾನ ಮರ್ಯಾದೆ ಹಾಳು ಮಾಡುತ್ತೇನೆಂದು ಬ್ಲಾಕ್‌ಮೇಲ್‌ ಮಾಡಿ,

ಹೆದರಿಸಿ ಪದೇ ಪದೇ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವೀಡಿಯೊ ಪ್ರಸಾರ ಮಾಡಿ ನನ್ನ ಮರ್ಯಾದೆ ಹಾಳು ಮಾಡಿರುವವರ ಮೇಲೆ ಕಾನೂನು ಕ್ರಮಕೈಗೊಳ್ಳಲು ಕೋರುತ್ತೇನೆ. ಅವರು ಬೆದರಿಕೆ ಹಾಕಿದ್ದಕ್ಕೆ ಭಯದಿಂದ ಹೆದರಿ ನನ್ನ ಮೇಲೆ ಆದ ಲೈಂಗಿಕ ದೌರ್ಜನ್ಯದ ಬಗ್ಗೆ ದೂರು ನೀಡಿರಲಿಲ್ಲ. ಈಗ ಎಸ್‌ಐಟಿ ರಚನೆಯಾಗಿ ತನಿಖೆಯಾಗುತ್ತಿರುವುದರಿಂದ ನನಗಾಗಿರುವ ದೌರ್ಜನ್ಯಕ್ಕೆ ಈ ದಿನ ಬಂದು ದೂರು ನೀಡಿದ್ದೇನೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.