Sunday, January 19, 2025
ದಕ್ಷಿಣ ಕನ್ನಡಸಂತಾಪಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ : ಸಿಡಿಲು ಸಹಿತ ಭಾರಿ ಮಳೆ : ಅಂಗಳದಲ್ಲಿ ಹರಡಿದ್ದ ಅಡಿಕೆ ಹೆಕ್ಕುವ ವೇಳೆ ಸಿಡಿಲು ಬಡಿದು ನವ ವಿವಾಹಿತ ಯುವಕ ಮೃತ್ಯು -ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಸಿಡಿಲಿನ ಆಘಾತಕ್ಕೆ ಸಿಲುಕಿ ನವ ವಿವಾಹಿತ ಯುವಕನೊಬ್ಬ ಮೃತಪಟ್ಟ ದಾರುಣ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಹೊಸೊಳಿಕೆ ಎಂಬಲ್ಲಿ ನಡೆದಿದೆ. 

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತಪಟ್ಟವರನ್ನು ಇಲ್ಲಿನ ನಿವಾಸಿ ದಿ. ಬೀರಣ್ಣ ಗೌಡ ಎಂಬವರ ಮಗ ಸೋಮಸುಂದರ (32) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಸಂಜೆ ವೇಳೆಗೆ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸಿಡಿಲು ಸಹಿತ ಮಳೆ ಸುರಿದಿತ್ತು. ಪರ್ವತ ಮುಖಿ ಬಳಿ ಸರ್ವೀಸ್ ಸ್ಟೇಷನ್ ನಡೆಸುತ್ತಿದ್ದ ಸೋಮಸುಂದರ್ ಮಳೆ ಬರುವ ಹಿನ್ನಲೆಯಲ್ಲಿ ಅಂಗಳದಲ್ಲಿ ಹರಡಿದ್ದ ಅಡಿಕೆ ಎತ್ತಿಡಲು ತೆರಳಿದ್ದರು.

ಈ ವೇಳೆ ಸಿಡಿಲಿನ ಹೊಡೆತಕ್ಕೆ ಸಿಲುಕಿ ಸೋಮಸುಂದರ್ ಆಘಾತಗೊಂಡರು.‌ ತಕ್ಷಣ ಅವರನ್ನು ‌ಕಡಬ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ‌ ಮೃತಪಟ್ಟರೆಂದು ತಿಳಿದುಬಂದಿದೆ.

ಮೃತ ಸೋಮಸುಂದರ್ 10 ದಿನಗಳ ಹಿಂದಷ್ಟೇ ವಿವಾಹವಾಗಿದ್ದು, ಮನೆಯಲ್ಲಿ ಮದುವೆಯ ಕಳೆಯನ್ನು ಸೂತಕದ ಛಾಯೆ ಕಸಿದುಕೊಂಡಿದೆ.