Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸಂತಾಪಸುದ್ದಿ

ಉಪ್ಪಿನಂಗಡಿ : ಮಲಗಿದ್ದಲೇ ಹೃದಯಾಘಾತಕ್ಕೆ ಯುವಕ ಬಲಿ-ಕಹಳೆ ನ್ಯೂಸ್

ಉಪ್ಪಿನಂಗಡಿ: ಕೊರೊನಾದ ಬಳಿಕ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಬಲಿಯಾಗುವ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಅದೇ ರೀತಿ ಗಾರೆ ಕೆಲಸಕ್ಕೆ ಹೋಗುವ ಯುವಕನೊಬ್ಬ ಮಲಗಿದ್ದಲೇ ಹೃದಯಾಘಾತಕ್ಕೆ ಸಿಲುಕಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪ ನಡೆದಿದೆ.

ನಿನ್ನಿಕಲ್ಲು ನಿವಾಸಿ ದಿ. ಗೋಪಾಲ ಗೌಡರ ಪುತ್ರ 27ರ ಹರೆಯದ ಜನಾರ್ದನ ನಿನ್ನಿಕಲ್ಲು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದ ಇವರು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲೇ ಇದ್ದರು. ಇವರ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು, ಸಂಜೆ ಬಂದು ನೋಡಿದಾಗ ಜನಾರ್ದನ ಮಲಗಿದ್ದಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ದುರ್ಗಾ ಭಜನಾ ಮಂಡಳಿ ದುರ್ಗಾಗಿರಿ ಮತ್ತು ಶ್ರೀ ದುರ್ಗಾ ಯುವಕ ಮಂಡಲ ದುರ್ಗಾಗಿರಿಯ ಸಕ್ರಿಯ ಸದಸ್ಯನಾಗಿದ್ದರು. ಮೃತರು ತಾಯಿ ಲಲಿತಾ, ಇಬ್ಬರು ಸಹೋದರರನ್ನು ಅಗಲಿದ್ದಾರೆ.