Wednesday, December 4, 2024
ದಕ್ಷಿಣ ಕನ್ನಡಸುದ್ದಿ

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಸಾಧಕ ಪಂಡಿತ್ ಉಪೇಂದ್ರ ಭಟ್ ಅವರ 75 ನೇ ಜನ್ಮ ಸಂವತ್ಸರದ ಸನ್ಮಾನ ಪಂಚಸಪ್ತತಿ ಸಂಪನ್ನ-ಕಹಳೆ ನ್ಯೂಸ್

ಯೂತ್ ಆಫ್ ಜಿಎಸ್ ಬಿ ವಾಹಿನಿಯಿಂದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪರವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮಹಾನ್ ಸಾಧಕರಾದ ಪಂಡಿತ್ ಉಪೇಂದ್ರ ಭಟ್ ಅವರಿಗೆ 75 ನೇ ಜನ್ಮ ಸಂವತ್ಸರದ ಪಂಚ ಸಪ್ತತಿ ಸನ್ಮಾನ ಕಾರ್ಯಕ್ರಮ ಅದ್ದೂರಿಯಾಗಿ ಟಿ ವಿ ರಮಣ್ ಪೈ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪಂಡಿತ್ ಉಪೇಂದ್ರ ಭಟ್ ಅವರು ತಮ್ಮ ಗುರು ಭಾರತ್ ರತ್ನ ಭೀಮಸೇನ್ ಜೋಷಿಯವರು ತಮ್ಮ ಸಂಗೀತ ಬದುಕಿಗೆ ಹಾಕಿಕೊಟ್ಟ ಅಡಿಪಾಯವನ್ನು ಸ್ಮರಿಸಿದರು. ಯೂತ್ ಆಫ್ ಜಿಎಸ್ ಬಿ ವಾಹಿನಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ತಮ್ಮಂತಹ ಸರಸ್ವತಿ ಆರಾಧಕರನ್ನು ಗೌರವಿಸುತ್ತಿರುವುದು ನಿಜಕ್ಕೂ ಮಾದರಿಯಾಗಿದೆ ಎಂದರು.
ಪಂಡಿತ್ ಉಪೇಂದ್ರ ಭಟ್ ಅವರ ಸಾಧನೆಯ ಬಗ್ಗೆ ಪ್ರಭಾಕರ ಜೋಷಿ ಮಾತನಾಡಿದರು.
ಸನ್ಮಾನ ಸ್ವೀಕರಿಸುವ ಪೂರ್ವಭಾವಿಯಾಗಿ ಪಂಡಿತ್ ಉಪೇಂದ್ರ ಭಟ್ ಅವರು ತಮ್ಮ ಜನಪ್ರಿಯ ಗೀತೆಗಳನ್ನು ಹಾಡಿ ನೆರೆದ ಅಸಂಖ್ಯಾತ ಸಂಗೀತಾಭಿಮಾನಿಗಳನ್ನು ರಂಜಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಪಿಟೀಲು ವಾದಕರಾದ ತೋನ್ಸೆ ರಂಗ ಪೈ ಪಿಟೀಲು ವಾದನ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹ್ಯಾಂಗ್ಯೋ ಐಸ್ ಕ್ರೀಂನ ಪ್ರದೀಪ್ ಪೈ, ಎಕ್ಸಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪ್ರೋ ನರೇಂದ್ರ ನಾಯಕ್, ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿಎ ಜಗನ್ನಾಥ್ ಕಾಮತ್, ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ರಂಗನಾಥ್ ಭಟ್, ಪಂಡಿತ್ ನರಸಿಂಹ ಆಚಾರ್ಯ, ಕಾಮತ್ ಕೇಟರರ್ಸ್ ಸುಧಾಕರ್ ಕಾಮತ್, ಮಿತ್ರವೃಂದ ಭಟ್, ದೀಪಾ ಪೈ, ತೋನ್ಸೆ ರಂಗ ಪೈ, ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಕಿರಣ್ ಶೆಣೈ ಹಾಗೂ ಯೂತ್ ಆಫ್ ಜಿಎಸ್ ಬಿ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಸಂಘಟನೆಯ ಪ್ರಮುಖರು ಪಂಡಿತ್ ಉಪೇಂದ್ರ ಭಟ್ ಅವರನ್ನು ಸನ್ಮಾನಿಸಿದರು. ಗೋಪಾಲಕೃಷ್ಣ ಭಟ್ ನಿರೂಪಿಸಿದರು. ಯೂತ್ ಆಫ್ ಜಿಎಸ್ ಬಿ ವಾಹಿನಿಯ ನೇರಪ್ರಸಾರದಲ್ಲಿ ಕಾರ್ಯಕ್ರಮ ಬಿತ್ತರವಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು