Monday, April 21, 2025
ಸುದ್ದಿ

ಆಮ್ನೆಸ್ಟಿ ಇಂಡಿಯಾದ ಬೆಂಗಳೂರು ಕಚೇರಿಗೆ ಇ.ಡಿ. ಅಧಿಕಾರಿಗಳ ದಾಳಿ – ಕಹಳೆ ನ್ಯೂಸ್

ಬೆಂಗಳೂರು: ಕಾನೂನುಬಾಹಿರವಾಗಿ ವಿದೇಶದಿಂದ ಹಣ ಪಡೆದ ಆರೋಪದಲ್ಲಿ ಮಾನವ ಹಕ್ಕುಗಳ ಪರ ಹೋರಾಡುವ ಸರಕಾರೇತರ ಸಂಘಟನೆ ಆಮ್ನೆಸ್ಟಿ ಇಂಡಿಯಾದ ಬೆಂಗಳೂರು ಕಚೇರಿಯ ಮೇಲೆ ಇ.ಡಿ. ಅಧಿಕಾರಿಗಳ ತಂಡ ದಾಳಿ ಮಾಡಿದೆ.

ನಿನ್ನೆ ಮಧ್ಯಾಹ್ನ 2 ಗಂಟೆಗೆ ಇಂದಿರಾನಗರ 2 ನೇ ಹಂತದಲ್ಲಿರುವ ಅಮೆಸ್ಟಿ ಕಚೇರಿಗೆ ಶೋಧ ವಾರಂಟ್ ನೊಂದಿಗೆ ತೆರಳಿದ ಐದಕ್ಕೂ ಹೆಚ್ಚು ಅಧಿಕಾರಿಗಳ ತಂಡ ರಾತ್ರಿಯವರೆಗೂ ಪರಿಶೀಲನೆ ನಡೆಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಎನ್ ಜಿಒಗಳಿಗೆ ವಿದೇಶಗಳಿಂದ ಕಾನೂನು ಮತ್ತು ನಿಯಮ ಉಲ್ಲಂಘಿಸಿ ಬರುತ್ತಿರುವ ಹಣಕಾಸಿನ ಮೇಲೆ ತೀವ್ರ ನಿಗಾ ಇರಿಸಿರುವ ಕೇಂದ್ರ ಸರ್ಕಾರ, ಎರಡು ವರ್ಷಗಳಿಂದ ಹಲವು ಎನ್ ಜಿಒಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಅದರ ಬಾಗವಾಗಿ ಅಮ್ನೆಸ್ಟಿ ಕಚೇರಿಗೂ ದಾಳಿ ನಡೆದಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ