Sunday, January 19, 2025
ಸುದ್ದಿ

ಲೈಂಗಿಕ ಕಿರುಕುಳ ಆರೋಪದ ಮೇಲೆ 48 ಸಿಬ್ಬಂದಿಯನ್ನು ಕಿತ್ತೆಸೆದಿದ ಗೂಗಲ್ ಸಂಸ್ಥೆ – ಕಹಳೆ ನ್ಯೂಸ್

ಕಳೆದ ಎರಡು ವರ್ಷಗಳಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಒಟ್ಟು 48 ಸಿಬ್ಬಂದಿಯನ್ನು ಗೂಗಲ್ ಸಂಸ್ಥೆ ಕಿತ್ತೆಸೆದಿದೆ ಎಂದು ಸರ್ಚ್ ಇಂಜಿನ್ ಧೈತ್ಯ ಗೂಗಲ್ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಂದರ್ ಪಿಚೈ ಹೇಳಿದ್ದಾರೆ.

ಲೈಂಗಿಕ ಕಿರುಕುಳ ಎದುರಿಸುತ್ತಿದ್ದ ಮೂವರು ಹಿರಿಯ ಅಧಿಕಾರಿಗಳನ್ನು ಗೂಗಲ್ ರಕ್ಷಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಮಾಡಿದ್ದ ವರದಿಯನ್ನು ತಳ್ಳಿಹಾಕಿದ ಅವರು, ‘ನಾವು ಕಚೇರಿಯ ವಾತಾವರಣ ಸುರಕ್ಷಿತವಾಗಿರುವಂತೆಯೇ ನೋಡಿಕೊಂದಿದ್ದೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂಥ ಆರೋಪಗಳು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಂಡಿದ್ದೇವೆ, ಕಂಪನಿಯ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ 48 ಸಿಬ್ಬಂದಿಯನ್ನು ಕಳೆದ ಎರಡು ವರ್ಷಗಳಲ್ಲಿ ಕೆಲಸದಿಂದ ಕಿತ್ತೆಸೆದಿದ್ದೇವೆ. ಸುರಕ್ಷಿತ ಔದ್ಯೋಗಿಕ ವಾತಾವರಣವನ್ನು ಸೃಷ್ಟಿಸಿದ್ದೇವೆ’ ಎಂದು ಭಾರತೀಯ ಮೂಲದ ಪಿಚೈ ಹೇಳಿದ್ದಾರೆ.