Tuesday, January 21, 2025
ಬೆಳ್ತಂಗಡಿಸುದ್ದಿ

ಶಿಥೀಲಾವಸ್ಥೆಯಲ್ಲಿರುವ ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು ಅಂಗನವಾಡಿ ಕೇಂದ್ರ  –ಕಹಳೆ ನ್ಯೂಸ್

ಬೆಳ್ತಂಗಡಿ : ನೆಲ್ಯಾಡಿ ಗ್ರಾಮದ ಕೊಲ್ಯೊಟ್ಟು ಎಂಬಲ್ಲಿ ಅಂಗನವಾಡಿ ಕೇಂದ್ರ ಇದ್ದು ಅದು 2000ನೇ ಇಸವಿಯಲ್ಲಿ ಸ್ಥಾಪನೆಗೊಂಡಿರುತ್ತದೆ. ಆ ಸಮಯದಲ್ಲಿ ಮರದ ಪಕ್ಕಾಸಿನ ಹಂಚಿನ ಮಾಡಿನಿಂದ ಮಾಡಲಾಗಿದೆ. ಇದು ಈಗ ಗೆದ್ದಲು ಹಿಡಿದು ಪಕ್ಕಾಸು ವಾಲ್ ಪ್ಲೇಟ್ ಸಂಪೂರ್ಣವಾಗಿ ಮುರಿದು ಬೀಳುವ ಸ್ಥಿತಿಯಲ್ಲಿದೆ.

ಇದಕ್ಕೆ ಸಂಬಂಧಪಟ್ಟ ಇಲಾಖೆಗೆ ಹಾಗೂ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದರು ಇದರ ಬಗ್ಗೆ ಗಮನ ಹರಿಸಿ ಇರುವುದಿಲ್ಲ. ಶಿಶು ಅಭಿವೃದ್ಧಿ ಇಲಾಖೆ ಎಂದು ಹೇಳುವ ಸರಕಾರ ಈ ತರಹ ನಿರ್ಲಕ್ಷ ತೋರಿಸುತ್ತಿರುವುದು ವಿಪರ್ಯಾಸವೇ ಸರಿ. ಮಳೆಗಾಲದಲ್ಲಿ ಮಕ್ಕಳು ಇರುವ ಸಮಯದಲ್ಲಿ ಒಂದೊಂದೇ ಪಕಾಸಗಳು ಕಳಚಿ ಬಿದ್ದರೆ ಮಕ್ಕಳ ಸ್ಥಿತಿ ಏನಾಗಬೇಕು. ಇದಕ್ಕೆ ಸಂಬಂಧಪಟ್ಟ ಇಲಾಖೆ ಅಥವಾ ಸರಕಾರ ಕೂಡಲೇ ಎಚ್ಚೆತ್ತು ಸರಿಯಾದ ಕಟ್ಟಡ ವ್ಯವಸ್ಥೆಯನ್ನು ಮಾಡದಿದ್ದಲ್ಲಿ ಯಾವುದೇ ಮಕ್ಕಳನ್ನು ಇಲ್ಲಿಗೆ ಕಳುಹಿಸಿ ಕೊಡುವುದಿಲ್ಲ ಇಲ್ಲಿ ಮಕ್ಕಳ ಜೀವನ ಮರಣದ ಪ್ರಶ್ನೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಿನ ಸರಕಾರ ಶಿಶುಕಲ್ಯಾಣದ ಬಗ್ಗೆ ಮಾತನಾಡುವ ಅವರು ಅಂಗನವಾಡಿ ಕೇಂದ್ರಕ್ಕೆ ಮಕ್ಕಳಿಗೆ ಗರ್ಭಿಣಿ ಸ್ತ್ರೀಯರಿಗೆ ಬೇಕಾದಂತಹ ಪೌಷ್ಟಿಕ ಆಹಾರವನ್ನು ಸಮಯಕ್ಕೆ ಸರಿಯಾಗಿ ಕಲೋಹಿಸಿ ಕೊಡುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆ ಸರಕಾರಗಳು ಕೂಡಲೇ ಕ್ರಮ ಕೈಗೊಳ್ಳಬೇಕು

ಜಾಹೀರಾತು
ಜಾಹೀರಾತು
ಜಾಹೀರಾತು