Tuesday, January 21, 2025
ದಕ್ಷಿಣ ಕನ್ನಡಮಂಗಳೂರುಶಿಕ್ಷಣಸುದ್ದಿ

ಕಲಿಕೆಯ ಜತೆಗೆ ಜೀವನ ಕೌಶಲಗಳ ವೇದಿಕೆಯನ್ನು ಅವಕಾಶ ಬಳಸಿಕೊಳ್ಳಿ ಅಜಿತ್ ಪೈ ; ಕೆನರಾ ಇಂಜಿನಿಯರಿAಗ್ ಕಾಲೇಜಿನಲ್ಲಿರಾಜ್ಯಮಟ್ಟದ ‘ಆಕೃತಿ’ ತಾಂತ್ರಿಕ, ಸಾಂಸ್ಕೃತಿಕ ಉತ್ಸವ 2024 – ಕಹಳೆ ನ್ಯೂಸ್

ಮಂಗಳೂರು: ಶೈಕ್ಷಣಿಕ ಜೀವನದಲ್ಲಿನ ತಾಂತ್ರಿಕ ಸಾಂಸ್ಕೃತಿಕ ಉತ್ಸವಗಳು ಕಲಿಕೆಯಲ್ಲಿ ಯಶಸ್ಸಿನ ಜತೆಗೆ ಬದುಕಿನಲ್ಲಿ ಉತ್ಸಾಹ ತುಂಬುವ ಅವಕಾಶಗಳಾಗಿವೆ. ತರಗತಿಯ ಜ್ಞಾನದ ಜತೆಗೆ ಸ್ಫೂರ್ತಿ, ಸೃಜನಶೀಲತೆ, ನಾಯಕತ್ವ, ಪರಿಶ್ರಮ , ಬದ್ಧತೆಯೇ ಮೊದಲಾದ ಕೌಶಲಗಳ ಮೂಲಕ ವ್ಯಕ್ತಿತ್ವ ರೂಪಿಸುವ ಈ ಅವಕಾಶಗಳ ವೇದಿಕೆಯನ್ನು ಯುವಜನತೆ ಸಮರ್ಥವಾಗಿ ಬಳಸಿಕೊಂಡು ಬೆಳೆಯಬೇಕು ಎಂದು ಡೆಲಿವರಿ ಲಿ. ಸಂಸ್ಥೆಯ ಕಾರ್ಯಾಚರಣೆ ವಿಭಾಗದ ಮುಖ್ಯ ಕಾರ್ಯಾಚರಣಾಧಿಕಾರಿ ಅಜಿತ್ ಪೈ ಹೇಳಿದರು. ಅವರು ಬೆಂಜನಪದವು ಕೆನರಾ ಇಂಜಿನಿಯರಿAಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ಆರಂಭಗೊAಡ ಮೂರು ದಿನಗಳ ರಾಜ್ಯಮಟ್ಟದ ‘ಆಕೃತಿ’ ತಾಂತ್ರಿಕ, ಸಾಂಸ್ಕೃತಿಕ ಉತ್ಸವವನ್ನು ದೀಪಪ್ರಜ್ವಲನದೊಂದಿಗೆ ಉದ್ಘಾಟಿಸಿ ಮಾತನಾಡಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಶೈಕ್ಷಣಿಕ, ಬ್ಯಾಂಕಿAಗ್ ಇನ್ನಿತರ ರಂಗಗಳಲ್ಲಿ ಮೇರು ಸಾಧನೆ ಮಾಡುವಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ, ಉಳ್ಳಾಲ ಶ್ರೀನಿವಾಸ ಮಲ್ಯ ,ಟಿ.ಎಂ.ಎ.ಪೈ ಹೀಗೆ ಅನೇಕ ಸಾಧಕರ ಕೊಡುಗೆಯಿದೆ. ಈ ಹಾದಿಯಲ್ಲಿ ಇನ್ನಷ್ಟು ಬೆಳೆಯುತ್ತಿರುವ ಕೆನರಾ ಶಿಕ್ಷಣ ಸಂಸ್ಥೆಗಳ ಪ್ರಗತಿಯ ಬಗ್ಗೆ ಹೆಮ್ಮೆ ಅನಿಸಿದೆ ಎಂದವರು ಶ್ಲಾಘಿಸಿದರು.
ಸಮಾರಂಭದ ಅಧ್ಯ
ಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಡಿ. ವಾಸುದೇವ ಕಾಮತ್ ಶಿಕ್ಷಣದ ಜತೆಗೆ ಸೃಜನ ಶೀಲ ಚಿಂತನೆ, ವಿಮರ್ಶಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜು ಸಂಚಾಲಕ, ಆಡಳಿತ ಮಂಡಳಿ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ ಕೆನರಾ ಶಿಕ್ಷಣ ಸಂಸ್ಥೆಗಳು ಮೌಲ್ಯಗಳ ಜತೆಗೆ ನಿರಂತರ ಪ್ರಗತಿ, ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಕಾರ್ಯ ಯೋಜನೆಯಲ್ಲಿ ಯಶಸ್ಸು ಕಾಣುತ್ತಿರುವುದರ ಹಿಂದೆ ಟೀಂ ವರ್ಕ್ ಕೊಡುಗೆಯಿದೆ ಎಂದರು.
ಪ್ರಾAಶುಪಾಲ ಡಾ. ನಾಗೇಶ್ ಹೆಚ್.ಆರ್. ವಾರ್ಷಿಕ ವರದಿ ವಾಚಿಸಿದರು. ಉಪ ಪ್ರಾಂಶುಪಾಲ ಡಾ.ಡೇಮಿಯನ್ ಎ. ಡಿಮೆಲ್ಲೋ, ಅತಿಥಿಯನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರತಿಭಾನ್ವಿತರು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಿದ್ಧಾರ್ಥ ಕಿಣಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ವಿಜಯರಾಜ್ ಪೈವಂದಿಸಿದರು. ವಿದ್ಯಾರ್ಥಿನಿ ಶ್ವೇತಾ ಬಾಳಿಗಾ ಕಾರ್ಯಕ್ರಮ ನಿರೂಪಿಸಿದರು.
ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ಕೆ.ಸುರೇಶ್ ಕಾಮತ್, ಉಪ ಕೋಶಾಧಿಕಾರಿ ಎಂ. ಜಗನ್ನಾಥ ಕಾಮತ್, ಸದಸ್ಯ ಶಿವಾನಂದ ಶೆಣೈ, ಆಡಳಿತ ಕೌನ್ಸಿಲ್ ಸದಸ್ಯ ವಿನಾಯಕ್ ಕಾಮತ್, ಆಕೃತಿ ಉತ್ಸವದ ಪ್ರಧಾನ ಸಮನ್ವಯಕಾರ ನವೀನ್ ಎ.ಕಲಾಲ್, ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷ ವಿಜಯರಾಜ್ ಪೈ, ಉಪಾಧ್ಯಕ್ಷೆ ಶಿವಾಲಿ, ಕಾರ್ಯದರ್ಶಿ ಮಹೇಶ್ ಪೈ, ಜತೆ ಕಾರ್ಯದರ್ಶಿ ಆದಿತ್ಯ ಭಕ್ತ, ಸಮನ್ವಯಕಾರರಾದ ವರ್ಷಿಣಿ, ನಾಗರಾಜ್, ರಕ್ಷಾ, ಆದರ್ಶ್, ಸಂಜನಾ ,ಮೇಘ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು