Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಬಿಸಿರೋಡಿನ ಎನ್.ಜಿ.ಸರ್ಕಲ್ ಸಮೀಪ ಎರಡು ಕಾರುಗಳ ನಡುವೆ ಡಿಕ್ಕಿ-ಕಹಳೆ ನ್ಯೂಸ್

ಬಂಟ್ವಾಳ: ಬಿಸಿರೋಡಿನ ಎನ್.ಜಿ.ಸರ್ಕಲ್ ಸಮೀಪ ಎರಡು ಕಾರುಗಳ ನಡುವೆ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ. ನರಿಕೊಂಬು ನಿವಾಸಿ ಸ್ವಾತಿ ಹಾಗೂ ಮೈರನ್ ಪಾದೆ ನಿವಾಸಿ ನವವಿವಾಹಿತ ಸುನಿಲ್ ಗಾಯಗೊಂಡವರು.

ಬAಟ್ವಾಳ ಪಂಜಿಕಲ್ಲುವಿನಿAದ ನರಿಕೊಂಬು ಕಡೆಗೆ ಹೋಗುತ್ತಿದ್ದ ಕಾರು ಹಾಗೂ ಬಿಸಿರೋಡು ಕಡೆಯಿಂದ ಕಾಮಾಜೆ ಕಡೆಗೆ ಬೈಪಾಸ್ ರಸ್ತೆಗೆ ಸಂಪರ್ಕ ಮಾಡುವ ಜಾಗದಲ್ಲಿ ಅಪಘಾತ ಸಂಭವಿಸಿದೆ.
ಅನಿಲ್ ಎಂಬವರು ಅವರ ಅತ್ತಿಗೆ ಸ್ವಾತಿಯವರನ್ನು ಪಂಜಿಕಲ್ಲುವಿನಿAದ ನರಿಕೊಂಬು ಮನೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಘಟನೆ ನಡೆದಿದೆ. ಸುನಿಲ್ ವಿದೇಶದಲ್ಲಿ ಉದ್ಯೋಗಿಯಾಗಿದ್ದಾರೆ. ಕಳೆದ ಎ.28 ರಂದು ವಿವಾಹವಾಗಿದ್ದರು.ಇಂದು ಪತ್ನಿ ಹಾಗೂ ಕುಟುಂಬದವರ ಜೊತೆ ದೇವಸ್ಥಾನಕ್ಕೆ ಹೋಗಿ,ದೇವರ ದರ್ಶನ ಪಡೆದು ಮನೆಗೆ ವಾಪಸು ಆಗುವ ವೇಳೆ ಇನ್ನೇನು ಮನೆಗೆ ಅರ್ಧ ಕಿ.ಮೀ.ದೂರದಲ್ಲಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಎರಡು ಕಾರುಗಳ ಎದುರು ಭಾಗ ಜಖಂಗೊAಡಿದೆ. ಅಪಘಾತದಿಂದ ಕೆಲ ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಬಿಸಿರೋಡಿನ ರಾಘವೇಂದ್ರ ಅವರ ಗಜಲಕ್ಮೀ ಕ್ರೇನ್ ಬಳಸಿ ವಾಹನಗಳನ್ನು ಬದಿಗೆ ಸರಿಸಲಾಗಿದೆ.ಅ ಬಳಿಕ ಟ್ರಾಫಿಕ್ ಕ್ಲೀಯರ್ ಆಗಿದೆ.ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಬೇಟಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು