ಮಂಗಳೂರು: ವ್ಯಕ್ತಿಯೋರ್ವರು ನೇತ್ರಾವತಿ ನದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಣೆಮಂಗಳೂರು ಪೇಟೆಯ ಸಮೀಪ ಸ್ಮಶಾನದ ಬಳಿಯಲ್ಲಿ ನಡೆದಿದೆ.
ಪಾಣೆಮಂಗಳೂರು ಸಮೀಪದ ನೆಹರು ನಗರ ಜನತಾಗ್ರಹ ನಿವಾಸಿ ಬಿ.ಕೆ.ತಾರಾನಾಥ ಅವರು ಆತ್ಮಹತ್ಯೆ ಮಾಡಿಕೊಂಡವರು. ಇವರು ಸ್ಮಶಾನ ದ ಕಡೆ ಹೋಗುವುದನ್ನು ಸ್ಥಳೀಯರು ಕಂಡಿದ್ದಾರೆ. ಅ ಬಳಿಕ ಶವ ನದಿ ತಟದಲ್ಲಿ ಇರುವುದನ್ನು ಗಮನಿಸಿ ಸ್ಥಳೀಯ ರು ನದಿಯಿಂದ ಮೇಲಕ್ಕೆ ಹಾಕಿದ್ದರು.
ನಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ತಾರಾನಾಥ ಅವರಿಗೆ ಕುಡಿತದ ಚಟವಿತ್ತು. ಇವರು ಪ್ರತಿವರ್ಷ ನವರಾತ್ರಿಯ ವೇಳೆ ವೇಷ ಹಾಕುತ್ತಿದ್ದರು, ಈ ಬಾರಿಯೂ ನವರಾತ್ರಿಯ ಸಂಧರ್ಭದಲ್ಲಿ ವೇಷ ಹಾಕಿದ್ದರು , ವಿಪರೀತ ಕುಡಿತದ ಚಟವಿದ್ದ ಇವರು ಅ ಬಳಿಕ ಕುಡಿಯುವುದನ್ನು ಬಿಟ್ಟಿದ್ದರು.
ಆದರೆ ಕುಡಿತ ಬಿಟ್ಟ ಬಳಿಕ ಅವರು ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಇವರ ಪತ್ನಿ ಹೇಮಾವತಿ ಪೋಲಿಸರಿಗೆ ತಿಳಿಸಿದ್ದಾರೆ. ತಾರಾನಾಥ ಅವರು ಪತ್ನಿಗೆ ಪಾಣೆಮಂಗಳೂರು ಸಮೀಪ ಸಿಕ್ಕಿದ್ದಾರೆ ಆದರೆ ಮಾತನಾಡದೆ ಹೋಗಿದ್ದಾರೆ, ರಾತ್ರಿ ಮನೆಗೂ ಬಂದಿರಲಿಲ್ಲ.
ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ತಾರಾನಾಥ ಅವರ ಪತ್ನಿ ಪಾಣೆಮಂಗಳೂರು ಐಸ್ ಕ್ರೀಂ ಪಾರ್ಲರೊಂದರಲ್ಲಿ ಕೂಲಿ ಮಾಡುತ್ತಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಎಸ್.ಐ.ಚಂದ್ರಶೇಖರ್ ಹಾಗೂ ಎ.ಎಸ್.ಐ.ಜಯರಾಮ್, ಹೆಡ್ ಕಾನ್ಸಟೇಬಲ್ ಮುರಗೇಶ್ ಮತ್ತು ಪೋಲೀಸ್ ಸಿಬ್ಬಂದಿ ಗಳು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.