Sunday, January 19, 2025
ಕ್ರೈಮ್ದಕ್ಷಿಣ ಕನ್ನಡಬೆಂಗಳೂರುಬೆಳ್ತಂಗಡಿಸುದ್ದಿ

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರ ವಿರುದ್ಧ ಅಪಮಾನಕಾರಿ ಹೇಳಿಕೆ, ನಿಂದನಾತ್ಮಕ ಪೋಸ್ಟ್ ; 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು – ವಿಡಿಯೋ ಹಾಗೂ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ಸಿಟಿ ಸಿವಿಲ್ ಕೋರ್ಟು ಆದೇಶ – ಕಹಳೆ ನ್ಯೂಸ್

ಬೆಂಗಳೂರು : ಯಾವುದೇ ಸಾಕ್ಷಾಧಾರಗಳಿಲ್ಲದೆ, ಡಿ. ಹರ್ಷೇಂದ್ರ ಕುಮಾರ್ ಅವರು ತೇಜೋವಧೆ ಯತ್ನ ನಡೆಸಿದವರಿಗೆ ಸಿಟಿ ಸಿವಿಲ್ ಕೋರ್ಟು ಬಿಸಿ ಮುಟ್ಟಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ಶ್ರೀಕ್ಷೇತ್ರ‌‌ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬಸ್ಥರ ಬಗ್ಗೆ ಅಪಮಾನಕಾರಿ ಹಾಗೂ ಅವಹೇಳನೆ ನಡೆಸುತ್ತಿದ್ದ, ಮಹೇಶ್ ಶೆಟ್ಟಿ ತಿಮರೋಡಿ ಬಳಗಗ್ಗೆ ಮತ್ತೊಂದು ಬಿಗ್ ಶಾಕ್ ಇದೀಗ ಸಿಕ್ಕಿದಂತಾಗಿದೆ. ಡಿ. ಹರ್ಷೇಂದ್ರ ಕುಮಾರ್ ಅವರು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಸೋಮನಾಥ ನಾಯಕ್, ತಮ್ಮಣ್ಣ ಶೆಟ್ಟಿ, ಜಯಂತ್ ಟಿ, ಪ್ರಸನ್ನರವಿ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದು, ಅದು 09. 05 2024 ರಂದು ವಿಚಾರಣೆಗೆ ಬಂದಿದ್ದು, ಖ್ಯಾತ ನ್ಯಾಯವಾದಿ ರಾಜಶೇಖರ್ ಹಿಲ್ಯಾರು ಅವರ ವಾದವನ್ನು ಆಲಿಸಿದ ನ್ಯಾಯಾಲಯವು, ಡಿ. ಹರ್ಷೇಂದ್ರ ಕುಮಾರ್ ಅವರ ವಿರುದ್ಧ ಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಅಪಮಾನಕಾರಿ ಹೇಳಿಕೆ ನೀಡದಂತೆ ಹಾಗೂ ನಿಂದನಾತ್ಮಕವಾಗಿ ಪೋಸ್ಟ್ ಮಾಡುವುದನ್ನು ಪ್ರತಿಬಂಧಿಸಿದೆ. ಹಾಗೂ ಈಗಾಗಲೇ ಪೋಸ್ಟ್ ಆಗಿರುವ ವಿಡಿಯೋಗಳನ್ನು ತಕ್ಷಣ ಡಿಲೀಟ್ ಮಾಡಲು ಆದೇಶಿಸಿದೆ. ನ್ಯಾಯಾಂಗದ ವಿರುದ್ಧ ಸಾಕ್ಷಾಧಾರಗಳಿಲ್ಲದೆ ಹೋಗುವವರಿಗೆ ಇದು ತಕ್ಕಪಾಠವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು