Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ ತಾಲೂಕಿನಲ್ಲಿ ಸುರಿದ ಪ್ರಥಮ ಮಳೆ : ಸಿಡಿಲು ಸಹಿತ ಗಾಳಿ ಮಳೆಗೆ ಅಲ್ಲಲ್ಲಿ ಮನೆಗಳಿಗೆ ಹಾನಿ – ಕಹಳೆ ನ್ಯೂಸ್

ಬಂಟ್ವಾಳ: ತಾಲೂಕಿನಲ್ಲಿ ಸುರಿದ ಪ್ರಥಮ ಸಿಡಿಲು ಸಹಿತ ಗಾಳಿ ಮಳೆಗೆ ಅಲ್ಲಲ್ಲಿ ಮನೆಗಳಿಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ವಿಟ್ಲಪಡ್ನೂರು ಗ್ರಾಮದ ಕೋಡಪದವು ಎಂಬಲ್ಲಿರುವ ಸರಕಾರಿ ಶಾಲೆಯ ಕಟ್ಟಡದ ಮೇಲ್ಚಾವಣಿಗೆ ಹಾನಿಯಾಗಿದ್ದು, ಸಾವಿರಾರು ರೂ ನಷ್ಟ ಸಂಭವಿಸಿದೆ.
ಪುಣಚ ಗ್ರಾಮದ ನಾರ್ಣಡ್ಕ ಎಂಬಲ್ಲಿ ವಾಸು ನಾಯ್ಕ್ ಅವರ ವಾಸದ ಮನೆಗೆ ಮರಬಿದ್ದು ಹಾನಿಯಾಗಿದೆ. ವೀರಕಂಭ ಗ್ರಾಮದ ಮಜಿ ನಿವಾಸಿ ಸರೋಜಿನಿ ಅವರ ವಾಸದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಅಳಿಕೆ ಗ್ರಾಮದ ಚೆಂಡುಲ ನಿವಾಸಿ ಹನೀಫ್ ಎಂಬವರ ಮನೆಗೆ ಮರಬಿದ್ದು ಹಾನಿಯಾಗಿರುವ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ಕಡೆಗಳಲ್ಲಿ ಮಳೆನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಯಲ್ಲಿ ನೀರು ನಿಂತ ದೃಶ್ಯಾವಳಿಗಳು ಕಂಡುಬಂದವು. ಮಳೆಗಾಲ ಆರಂಭವಾಗುವ ಸಮಯ ಹತ್ತಿರ ಬಂದರೂ ಚರಂಡಿಯ ರಿಪೇರಿ ಕಾರ್ಯಗಳು ನಡೆದಿಲ್ಲ,ಕೆಲವು ಕಡೆಗಳಲ್ಲಿ ಚರಂಡಿಯೇ ಇಲ್ಲದೆ ನೀರು ರಸ್ತೆಯ ಮೇಲೆ ಹರಿದು ರಸ್ತೆ ಹಾಳಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದು, ಸಂಬಂಧಿಸಿದ ಇಲಾಖೆಯವರು ದೃಷ್ಟಿ ಹಾಯಿಸಬೇಕಾಗಿದೆ.