Sunday, November 24, 2024
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಅಂತಾರಾಷ್ಟ್ರೀಯ ದಾದಿಯರ ದಿನ ಆಚರಣೆ : “ದಾದಿಯರು ಆಸ್ಪತ್ರೆಯ ಹೃದಯವಿದ್ದಂತೆ” – ಡಾ| ಗೋಪಾಲಕೃಷ್ಣ. ಕೆ- ಕಹಳೆ ನ್ಯೂಸ್

ಜಗತ್ತು ಕಂಡ ಅಪ್ರತಿಮದಾದಿ Florence Nightingale ಅವರ ಜನ್ಮದಿನ ಮೇ 12 ನೇ ದಿನಾಂಕವನ್ನು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ಪ್ರತಿವರ್ಷ ಇದನು  ಆಚರಿಸಿಕೊಂಡುಬರುತ್ತಿದ್ದು , ಈ ವರ್ಷ ಕೂಡ ಕೆಲವು ವಿಶೇಷತೆಗಳನ್ನು ಒಳಗೊಂಡAತೆ ದಾದಿಯರದಿನ ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆನಕ ಹೆಲ್ತ್ ಸೆಂಟರ್ ನ ವೈದ್ಯಕೀಯ ನಿರ್ದೇಶಕರಾದ ಡಾ| ಗೋಪಾಲಕೃಷ್ಣ. ಕೆ ರವರು ಮಾತನಾಡುತ್ತ ಒಂದು ಆಸ್ಪತ್ರೆ ಸರಿಯಾದ ರೀತಿಯಲ್ಲಿ ರೋಗಿಗಳಿಗೆ ಶುಶ್ರೂಷೆ ನೀಡಲು ದಾದಿಯರ ಕರ್ತವ್ಯ ಮಹತ್ವವಾದದ್ದು, ಅವರು ಆಸ್ಪತ್ರೆಯ ಹೃದಯವಿದ್ದಂತೆ ನಮ್ಮ ಆಸ್ಪತ್ರೆಯು ಈ ಹಂತ ತಲುಪಲು ಇಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರ ಕರ್ತವ್ಯ ಶ್ಲಾಘನೀಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ 35 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯದಾದಿ ಶ್ರೀಮತಿ ಫಿಲೋಮಿನಾರವರನ್ನು ಅವರು ನೀಡಿದ ಸೇವೆಯನ್ನು ಸ್ಮರಿಸಿ ಡಾ| ಗೋಪಾಲಕೃಷ್ಣ ಮತ್ತು ಡಾ| ಭಾರತಿ ದಂಪತಿಗಳು ಶಾಲು ಹೊದಿಸಿ ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಸ್ಟರ್ ಅಶ್ವಿನಿ. ಕೆ.ಯವರು ಈ ದಿನದ ಮಹತ್ವ ಕುರಿತು ಮಾಹಿತಿ ನೀಡಿದರು. ಸಿಸ್ಟರ್ ಅಶ್ವಿನಿ. ಕೆ. ಯವರು ಆಸ್ಪತ್ರೆಯ ಎಲ್ಲ ದಾದಿಯರಿಗೆ ಪ್ರತಿಜ್ಞಾ ವಿಧಿ ಬೋಧಿಸಿವರು. ಆಸ್ಪತ್ರೆಯ ಪಿ.ಅರ್. ಓಎಸ್. ಈ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಡಾ| ಭಾರತಿ ಜಿ. ಕೆಯವರು ಧನ್ಯವಾದ ಸಮರ್ಪಿಸಿದರು. ಕೊನೆಯಲಿ ್ಲ ಆಸ್ಪತ್ರೆಯ ದಾದಿಯರು ಮತ್ತು ಸಿಬ್ಬಂದಿಗಳಿAದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.