Sunday, January 19, 2025
ದಕ್ಷಿಣ ಕನ್ನಡಶಿಕ್ಷಣಸುದ್ದಿಸುಳ್ಯ

ಎನ್ನೆಂಸಿ; “ಸ್ವಾವಲಂಬನೆಯಡೆಗೆ ಒಂದು ಹೆಜ್ಜೆ” ಕೌಶಲ್ಯ ತರಬೇತಿ ಶಿಬಿರ– ಕಹಳೆ ನ್ಯೂಸ್

ನೆಹರು ಮೆಮೋರಿಯಲ್ ಕಾಲೇಜು ಸುಳ್ಯ, ಸಮಾಜ ಕಾರ್ಯ ವಿಭಾಗ ಗ್ರಾಮ ಪಂಚಾಯತ್ ಪೆರಾಜೆ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕುಂಬಳಚೇರಿ ಇವರ ಜಂಟಿ ಆಶ್ರಯದಲ್ಲಿ ಸಮುದಾಯ ತರಬೇತಿ ಶಿಬಿರ “ಸ್ವಾವಲಂಬನೆಡೆಗೆ ಒಂದು ಹೆಜ್ಜೆ” ಭಾಗ- 2 ಕೌಶಲ್ಯ ತರಬೇತಿ ಶಿಬಿರವು ಮೇ 7 ಮಂಗಳವಾರದಿಂದ ಮೂರು ದಿನಗಳವರೆಗೆ ಎರಡು ವಿಭಾಗದಲ್ಲಿ ನಡೆಯಿತು. ಇದರಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಕಸಿ ಕಟ್ಟುವಿಕೆ ಹಾಗೂ ಫ್ಯಾಶನ್ ಡಿಸೈನ್ ಮತ್ತು ಕರಕುಶಲ ವಸ್ತು ತಯಾರಿ ತರಬೇತಿಗಳ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಮೂಲಕ ನೀಡಲಾಯಿತು.

ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಚಂದ್ರಕಲಾ ಬಾಲಚಂದ್ರ ಅಧ್ಯಕ್ಷರು ಗ್ರಾಮ ಪಂಚಾಯತ್ ಪೆರಾಜೆ ವಹಿಸಿ, ದೀಪ ಬೆಳಗುವುದರ ಮೂಲಕ ಉದ್ಘಾಟನೆಯನ್ನು ಡಾ. ಕೆ. ವಿ. ಚಿದಾನಂದ ಅಧ್ಯಕ್ಷರು ಎ.ಒ.ಎಲ್,ಇ (ರಿ) ಸುಳ್ಯ ನೆರವೇರಿಸಿದರು. ಪೆರಾಜೆ ಪರಿಸರದಲ್ಲಿ ತನ್ನ ಜೀವನದಲ್ಲಿ ಆದಂತಹ ನೆನಪುಗಳನ್ನು ಮೆಲುಕು ಹಾಕಿದರು. ಹಾಗೆಯೇ ಪ್ರಸ್ತುತ ದಿನಗಳಲ್ಲಿ ಸ್ವಾವಲಂಬನೆ ಒಂದು ಒಳ್ಳೆಯ ವಿಚಾರವಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಉದ್ಘಾಟಕರು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರುದ್ರ ಕುಮಾರ್ ಎಂ. ಎಂ. ಪ್ರಾಂಶುಪಾಲರು ಎನ್. ಎಂ. ಸಿ. ಸುಳ್ಯ, ಶ್ರೀಯುತ ನಾಗೇಶ್ ಕುಂದಲ್ಪಾಡಿ, ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಕುಂಬಳಚೇರಿ ಪೆರಾಜೆ, ಶ್ರೀಯುತ ಜಿತೇಂದ್ರ ನಿಡ್ಯಮಲೆ ಆಡಳಿತ ಮೊಕ್ತೇಸರರು, ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ ,ಶ್ರೀಯುತ ಸುರೇಶ್ ಪೆರುಮುಂಡ ಸದಸ್ಯರು ಗ್ರಾಮ ಪಂಚಾಯತ್ ಪೆರಾಜೆ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀಮತಿ ಕೃಪಾ.ಎ.ಎನ್. ಮುಖ್ಯಸ್ಥರು ಸಮಾಜ ಕಾರ್ಯ ವಿಭಾಗ ಎನ್.ಎಂ. ಸಿ. ಸುಳ್ಯ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನು ಆಡುವುದರ ಮೂಲಕ ಗಣ್ಯರನ್ನು ಸ್ವಾಗತಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೂರು ದಿನದ ಕೌಶಲ್ಯ ತರಬೇತಿ ಶಿಬಿರದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಹಿತಿ ಮತ್ತು ಹೂವಿನ ಗಿಡಗಳು, ಮಾವು, ಕೊಕ್ಕೋಗಳ ಕಸಿ ಕಟ್ಟುವಿಕೆ ಹಾಗೂ ಸಾವಯವ ಗೊಬ್ಬರ ತಯಾರಿಕೆ ಮಾಹಿತಿ ಹಾಗೂ ಇದರ ಜೊತೆಯಲ್ಲಿ ಫ್ಯಾಷನ್ ಡಿಸೈನ್ ಮತ್ತು ಕರಕುಶಲ ತರಬೇತಿಯಲ್ಲಿ ಸಿಂಪಲ್ ಮೇಕಪ್ ಮತ್ತು ಐಬ್ರೋಸ್, ಕೃತಕ ಆಭರಣ ತಯಾರಿ, ಪಿಲ್ಲೋ ಕವರ್, ಮ್ಯಾಟ್ ಬ್ಯಾಗ್ ತಯಾರಿಕೆ , ಹೇರ್ ಸ್ಟೈಲ್, ವಿವಿಧ ಶೈಲಿಯ ಸಾರಿ ತೊಡುಗೆಯ ಮಾಹಿತಿಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ತುಳಸಿ ದಯಪ್ರಸಾದ್ ಚೀಮುಳ್ಳು, ಶ್ರೀಯುತ ಶಾಮ್ ಭಟ್ ಗರಗೋಡಿ ಕಲ್ಮಡ್ಕ, ಶ್ರೀಯುತ ಜಗದೀಶ್ ಪರಮಲೆ, ಶ್ರೀಯುತ ವೆಂಕಟೇಶ್ ಕೃಷ್ಣ ಶರ್ಮ ಮುಳಿಯ, ಕುಮಾರಿ ನಂದಿತಾ ಬಿ.ಪಿ., ಶ್ರೀಯುತ ಕುಲದೀಪ್ ಪಿ.ಪಿ.,
ಫ್ಯಾಶನ್ ಡಿಸೈನ್ ಮತ್ತು ಕರಕುಶಲ ತರಬೇತುದಾರರು ಶ್ರೀಮತಿ ಶಿಲ್ಪಾ ಸನತ್ ಎಸ್.ಎ., ಶ್ರೀಮತಿ ರಾಜೇಶ್ವರಿ ಶುಭಕರ್, ಶ್ರೀಮತಿ ಕುಸುಮ ಕೇಶವ ಬಂಗ್ಲ ಗುಡ್ಡೆ- ಪೇರಣ ಸಹಕರಿಸಿದರು.

ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಪ್ರಮೀಳ ಬಂಗಾರಕೋಡಿ ಅಧ್ಯಕ್ಷರು ಎಸ್.ಡಿ. ಎಂ. ಸಿ., ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಕುಂಬಳಚೇರಿ, ಸಮಾರೋಪ ಭಾಷಣವನ್ನು ಚಂದ್ರಶೇಖರ ಪೇರಾಲು, ಶೈಕ್ಷಣಿಕ ಸಲಹೆಗಾರರು ನೆಹರು ಮೆಮೋರಿಯಲ್ ಪದವಿ ಪೂರ್ವ ಕಾಲೇಜು ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ನಂಜಪ್ಪ ನಿಡ್ಯಮಲೆ, ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಪೆರಾಜೆ, ಪ್ರವೀಣ್ ಬಂಗಾರ ಕೊಡಿ, ಸದಸ್ಯರು ಗ್ರಾಮ ಪಂಚಾಯತ್ ಪೆರಾಜೆ, ಶ್ರೀಯುತ ರಾಕೇಶ್ ಕುಂದಲ್ಪಾಡಿ, ಶ್ರೀಮತಿ ಕೃಪಾ ಎ .ಎನ್. ಮುಖ್ಯಸ್ಥರು ಸಮಾಜ ಕಾರ್ಯ ವಿಭಾಗ ವಿಭಾಗ ಎನ್.ಎಂ. ಸಿ.ಸುಳ್ಯ, ಶ್ರೀಮತಿ ಶೋಭಾ.ಎ ಸಂಯೋಜಕರು, ಸಮಾಜ ಕಾರ್ಯ ವಿಭಾಗ ಎನ್. ಎಂ. ಸಿ. ಸುಳ್ಯ ಇವರು ಉಪಸ್ಥಿತರಿದ್ದರು . ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು ಹಾಗೂ ಶಿಬಿರದ ಯಶಸ್ಸಿಗೆ ಸಹಕರಿಸಿದವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೌಶಲ್ಯ ತರಬೇತಿ ಶಿಬಿರದಲ್ಲಿ 120 ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡರು. ಈ ತರಬೇತಿ ಶಿಬಿರದಲ್ಲಿ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡು ಸಹಕರಿಸಿದರು. ಹಲವು ಸಂಘ ಸಂಸ್ಥೆಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು .