Wednesday, April 2, 2025
ದೆಹಲಿರಾಜಕೀಯಸುದ್ದಿ

ಕೊಟ್ಟ ಮಾತಿನಂತೆ ಚಿತ್ರ ಬಿಡಿಸಿದ ಯುವತಿಗೆ ಪತ್ರ ಬರೆದ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಬಾಗಲಕೋಟೆ: ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಫೋಟೋ ಹಿಡಿದು ನಿಂತಿದ್ದ ಯುವತಿಯನ್ನು ಕಂಡು ತಮ್ಮ ಅಂಗರಕ್ಷಕ ಅಧಿಕಾರಿಗಳಿಂದ ಯುವತಿಯ ಫೋಟೊ ತರಿಸಿಕೊಂಡು, ಪತ್ರ ಬರೆಯುವುದಾಗಿ ತಿಳಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ಪ್ರಧಾನಿ ಮೋದಿ ಯುವತಿಗೆ ಪತ್ರ ಬರೆದಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಧಾನಿ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಅವರ ಚಿತ್ರ ಬಿಡಿಸಿ, ಸ್ಕೆಚ್ ನೀಡಿದ್ದ ಬಾಗಲಕೋಟೆಯ ಯುವತಿ ನಾಗರತ್ನ ಮೇಟಿ ಎಂಬ ಯುವತಿಗೆ ಪ್ರಧಾನಿ ಮೋದಿ ಪತ್ರ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವತಿಗೆ ಮೋದಿಯವರ ಪತ್ರ ಪೋಸ್ಟ್ ಮೂಲಕ ತಲುಪಿದೆ. ಮೋದಿಯವರ ಪತ್ರದಲ್ಲಿ ಸುಂದರವಾದ ಭಾವಚಿತ್ರ ಉಡುಗೊರೆಯಾಗಿ ನೀಡಿದ್ದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಈ ಕಲಾತ್ಮಕ ಕೆಲಸವು ಮಾನವ ಭಾವನೆಗಳ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ನಿಮ್ಮ ವರ್ಣಚಿತ್ರ ರೋಮಾಂಚಕ ಪ್ರದರ್ಶನವು ಯುವಶಕ್ತಿಯ ಸಾರವನ್ನು ಒಳಗೊಂಡಿರುತ್ತದೆ. ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ.

ನಿಮ್ಮ ಸೃಜನಶೀಲ ಪ್ರತಿಭೆ ಮತ್ತು ಕೌಶಲ್ಯಗಳನ್ನು ನಿಮ್ಮ ಕೆಲಸಕ್ಕೆ ಅನ್ವಯಿಸುವಲ್ಲಿ ನೀವು ನಿರಂತರವಾಗಿರಿ. ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು. ಇಂತಿ, ನಿಮ್ಮ ನರೇಂದ್ರ ಮೋದಿ ಎಂದು ಉಲ್ಲೇಖ ಮಾಡಿ ಮೋದಿ ಪತ್ರ ಬರೆದಿದ್ದಾರೆ. ಸದ್ಯ ಈ ಯುವತಿಗೆ ಮೋದಿ ಬರೆದಿರುವ ಪತ್ರ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ