Recent Posts

Sunday, January 19, 2025
ರಾಜಕೀಯಸುದ್ದಿ

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ: ಡಿಕೆಶಿಯಿಂದ ಭರ್ಜರಿ ಪ್ರಚಾರ – ಕಹಳೆ ನ್ಯೂಸ್

ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ವಿ.ಎಸ್. ಉಗ್ರಪ್ಪನವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿರುವ ಸಚಿವ ಡಿ.ಕೆ. ಶಿವಕುಮಾರ್ ಪ್ರಚಾರದ ಜೊತೆಜೊತೆಗೆ ಬಳ್ಳಾರಿಯ ವೈಶಿಷ್ಟ್ಯಗಳನ್ನು ಅರಿಯುತ್ತಿದ್ದಾರೆ.

ಈ ಮೊದಲು ಪ್ರಚಾರದ ಸಂದರ್ಭದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯೊಂದಕ್ಕೆ ಭೇಟಿ ನೀಡಿದ್ದ, ಡಿ.ಕೆ. ಶಿವಕುಮಾರ್, ಬಳ್ಳಾರಿ ಜೀನ್ಸ್ಗಳ ಬಗ್ಗೆ ಕುತೂಹಲದಿಂದ ಮಾಹಿತಿ ಪಡೆದುಕೊಂಡಿದ್ದರಲ್ಲದೆ ತಮಗಾಗಿ 10 ಜೀನ್ಸ್ ಪ್ಯಾಂಟ್ ಗಳನ್ನು ಆರ್ಡರ್ ಮಾಡಿ ಐದು ಸಾವಿರ ರೂ. ಮುಂಗಡವಾಗಿ ನೀಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಅಪಾರ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸುತ್ತಿದ್ದ ವೇಳೆ ಬಳ್ಳಾರಿಯ ಪ್ರಸಿದ್ಧ ಮಿರ್ಚಿ, ಮಂಡಕ್ಕಿ ಸವಿದಿದ್ದಾರೆ. ಉಗ್ರಪ್ಪನವರ ಗೆಲುವಿಗೆ ಟೊಂಕ ಕಟ್ಟಿ ನಿಂತಿರುವ ಡಿ.ಕೆ. ಶಿವಕುಮಾರ್, ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು