Tuesday, January 28, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಅಮಲು ಪದಾರ್ಥವನ್ನು ಸೇವಿಸಿ ಸಾರ್ವಜನಿಕವಾಗಿ ಅನುಚಿತವಾಗಿ ವರ್ತನೆ : ಆರೋಪಿ ಅರೆಸ್ಟ್ – ಕಹಳೆ ನ್ಯೂಸ್

ಬಂಟ್ವಾಳ: ಅಮಲು ಪದಾರ್ಥವನ್ನು ಸೇವಿಸಿ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ್ದಲ್ಲದೆ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ ಘಟನೆ ನಡೆದಿದೆ.

ಮೂಲತಃ ಸಜೀಪ ನಡು ನಿವಾಸಿಯಾಗಿರುವ ಪ್ರಸ್ತುತ ಲೊರೆಟ್ಟೋ ಬಾರೆಕಾಡುವಿನಲ್ಲಿ ವಾಸವಾಗಿರುವ ದಾವುದುಲ್ ಹಕೀಮ್ (23) ಬಂಧಿತ ಆರೋಪಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತನ ಕೈಯಿಂದ ಸುಮಾರು 500 ರೂ. ಮೌಲ್ಯದ 15.31 ಗ್ರಾಂ ಗಾಂಜಾ ಹಾಗೂ ರೂ.2 ಸಾವಿರ ಮೌಲ್ಯದ 01.07 ಗ್ರಾಂ ನಿದ್ರಾಜನಕ MDMA ಸೊತ್ತನ್ನು ಮತ್ತು ಗಾಂಜಾ ಸಾಗಾಣಿಕೆ ಮಾಡಲು ಉಪಯೋಗಿಸಿದ 60 ಸಾವಿರ ಮೌಲ್ಯದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಕೀಮ್ ಫೈಟಿಂಗ್ ಕೆಲಸ ಮಾಡುತ್ತಿದ್ದು, ಮೂಡಬಿದಿರಯಲ್ಲಿರುವ ಈತನ ಸ್ನೇಹಿತ ನಿಂದ ನಿದ್ರಾಹೀನತೆಗೆ ಸಂಬ0ಧಿಸಿದ ಪದಾರ್ಥಗಳನ್ನು ಪಡೆದುಕೊಂಡು ಗಿರಾಕಿಗಳಿಗೆ ಮಾರಾಟಕ್ಕೆ ಉಪಯೋಗ ಮಾಡುವ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.