Sunday, January 19, 2025
ಬೆಂಗಳೂರುಸುದ್ದಿ

ಪತ್ನಿಗೆ ಬೆದರಿಸಲು ಹೋಗಿ ನಿಜವಾಗಿಯೂ ಸಾವನಪ್ಪಿದ ಪತಿ – ಕಹಳೆ ನ್ಯೂಸ್

ಬೆಂಗಳೂರು : ಪತಿಯಿಂದ ಬೆಸರಿಸಿಕೊಂಡು ತವರು ಮನೆ ಸೇರಿದ್ದ ಪತ್ನಿಯನ್ನು ಮತ್ತೆ ಕರೆತರಲು ಪತಿಯೊಬ್ಬ ಆತ್ಮಹತ್ಯೆ ನಾಟಕವಾಡಲು ಹೋಗಿ ನೀಜವಾಗಿಯೂ ಸಾವನಪ್ಪಿದ ಘಟನೆ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಮೃತ ವ್ಯಕ್ತಿ.​

10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅಮಿತ್ ಕುಮಾರ್, ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸಿ, ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದ. ಆದರೆ, ಇತ್ತೀಚೆಗೆ ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ತನಗೆ ಸಮಯ ನೀಡುತ್ತಿಲ್ಲ, ಸ್ನೇಹಿತರೊಂದಿಗೆ ಸದಾ ಫೋನ್ ಕರೆಯಲ್ಲಿರುತ್ತಾಳೆ ಎಂಬ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ಬೇಸತ್ತ ಪತ್ನಿ, ಅಮಿತ್ ಕುಮಾರ್​ನನ್ನು ತೊರೆದು ಬೇರೆಡೆ ವಾಸವಿದ್ದಳು ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ನಿಗೆ ಕರೆ ಮಾಡುತ್ತಿದ್ದ ಅಮಿತ್ ಕುಮಾರ್ ಮನೆಗೆ ಬರುವಂತೆ ಪದೇ ಪದೇ ಮನವಿ ಮಾಡುತ್ತಿದ್ದ. ಬುಧವಾರವೂ ಕೂಡ ಪತ್ನಿಗೆ ವಿಡಿಯೋ ಕಾಲ್​​ ಮಾಡಿರುವ ಆತ, ನೇಣು ಬಿಗಿದುಕೊಂಡಂತೆ ಬೆದರಿಸಲು ಯತ್ನಿಸಿದ್ದಾನೆ. ಆದರೆ ದುರಾದೃಷ್ಟವಶಾತ್ ಅದೇ ನೇಣಿಗೆ ಕುತ್ತಿಗೆ ಬಿಗಿದುಕೊಂಡ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ‌.

ಜಾಹೀರಾತು
ಜಾಹೀರಾತು
ಜಾಹೀರಾತು