ವಾಮಂಜೂರಿನ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ದಶಮಾನ ಸಂಭ್ರಮದ ಪ್ರಯುಕ್ತ ನಡೆದ ಹವ್ಯಾಸಿ ಯಕ್ಷಗಾನ ಬಯಲಾಟ ಸ್ಪರ್ಧೆಯಲ್ಲಿ ದ್ವಿತೀಯ ಸಮಗ್ರ ತಂಡ ಪ್ರಶಸ್ತಿ ಪಡೆದ ಉಡುಪಿಯ ನಾದೋನ್ಮಯ ಕ್ರಿಯೇಶನ್ಸ್ – ಕಹಳೆ ನ್ಯೂಸ್
ಮಂಗಳೂರು: ವಾಮಂಜೂರಿನ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದವರು ದಶಮಾನ ಸಂಭ್ರಮದ ಪ್ರಯುಕ್ತ ನಡೆದ ಹವ್ಯಾಸಿ ಯಕ್ಷಗಾನ ಬಯಲಾಟ ಸ್ಪರ್ಧೆಯು ಮೇ 12 ರಂದು ನಡೆಯಿತು.
ಸ್ಪರ್ಧೆಯಲ್ಲಿ ಉಡುಪಿಯ ನಾದೋನ್ಮಯ ಕ್ರಿಯೇಶನ್ಸ್ ತಂಡವು ಖಳಕುಲೋದ್ಭವ ಮೇಘನಾದ ಪ್ರಸಂಗವನ್ನು ಪ್ರದರ್ಶಿಸಿ ದ್ವಿತೀಯ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪೋಷಕಪಾತ್ರದಲ್ಲಿ ಹನುಮಂತ (ಸುನಿಲ್ ಪಲ್ಲಮಜಲು )ಪ್ರಥಮ, ರಾಜವೇಷ -ಇಂದ್ರಜಿತು( ಪ್ರಜ್ವಲ್ ಶೆಟ್ಟಿ) ಪ್ರಥಮ, ಪುಂಡು ವೇಷ – ಲಕ್ಷ್ಮಣ (ಕೃ ತಿಕ್ ಶೆಟ್ಟಿ) ದ್ವಿತೀಯ,ಬಣ್ಣದ ವೇಷ – ರಾವಣ(ಸಂದೇಶ್ ಭಟ್ ಖಂಡೆರಿ) ತೃತೀಯ ಪಡೆದಿದ್ದಾರೆ.