” ನಮ್ಮ ಮಠದ ರಕ್ಷಣೆ ನಮ್ಮ ಹೊಣೆ ” ; ನಾಳೆ ಮಾಣಿ ಮಠದಲ್ಲಿ ರಾಘವೇಶ್ವರಭಾರತೀ ಶ್ರೀಗಳ ಬೆಂಬಲಿಗರ ಬೃಹತ್ ಸಮಾವೇಶ – ಕಹಳೆ ನ್ಯೂಸ್
ಬಂಟ್ವಾಳ : ಪ್ರತಿಷ್ಠಿತ ಶ್ರೀರಾಮಚಂದ್ರಾಪುರ ಮಠದ ಶ್ರೀಗಳ ಮೇಲೆ ಮತ್ತು ಮಠದ ಮೇಲೆ ಕಳೆದ ಐದು ಆರು ವರ್ಷಗಳಿಂದ ನಿರಂತರವಾಗಿ ಆಕ್ರಮಣಗಳು ನಡೆಯುತ್ತಿದ್ದು, ಸಧ್ಯ ಶ್ರೀಗಳ ತೇಜೋವಧೆಗೆ ಹುನ್ನಾರ ನಡೆಸಿದ್ದಾರೆ ಎಂದು ಮಠದ ಮಹಾಮಂಡಲದ ಅಧ್ಯಕ್ಷೆ ಈಶ್ವರೀ ಬೆರ್ಕಡವು ಕಹಳೆ ನ್ಯೂಸ್ ಗೆ ಹೇಳಿಕೆ ನೀಡಿದ್ದಾರೆ.
ನಿರಂತರ ಆಕ್ರಮಣಗಳಿಗೆ ಉತ್ತರ ಸ್ವರೂಪವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಮಠದಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಿದ್ದು , ರಾಮಚಂದ್ರಪುರ ಮಠದ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆಯಿದೆ.
ನಾಳೆ ಮಧ್ಯಾಹ್ನ 3 ಗಂಟೆಗೆ ನಮ್ಮ ಮಠದ ರಕ್ಷಣೆ ನಮ್ಮ ಹೊಣೆ ಎಂಬ ಶೃಶಿಕೆಯಲ್ಲಿ ಸಮಾರಂಭ ನಡೆಯಲಿದೆ ಎಂದು ಈಶ್ವರೀ ಬೇರ್ಕಡವು ತಿಳಿಸಿದ್ದಾರೆ.