Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ: ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಮಹಿಳೆ – ಕಹಳೆ ನ್ಯೂಸ್

ಬಂಟ್ವಾಳ: ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆಯೋರ್ವಳು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಡಗಬೆಳ್ಳೂರು ಗ್ರಾಮದಲ್ಲಿ ನಡೆದಿದೆ.

ಬಡಗಬೆಳ್ಳೂರು ಗ್ರಾಮದ ವಾರಟೀಲು ನಿವಾಸಿ ಇಂದಿರಾ ಕುಲಾಲ್ ( 42) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇಂದಿರಾ ಅವರು ಕೂಲಿ ಕೆಲಸಕ್ಕೆ ಹೋಗಿತ್ತಿದ್ದು ವಿಪರೀತ ಕುಡಿತದ ಚಟ ಹೊಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಡ ಹೆಂಡತಿ ಇಬ್ಬರು ವಿಪರೀತ ಕುಡಿತದ ಚಟ ಹೊಂದಿದ್ದು,ಇವರ ಇಬ್ಬರು ಮಕ್ಕಳು ನೆರೆಯ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ಹಾಗಾಗಿ ಇಂದಿರಾಹಾಗೂ ಅವರ ಗಂಡ ಇಬ್ಬರೇ ಮನೆಯಲ್ಲಿದ್ದು, ಇವತ್ತು ಬೆಳಿಗ್ಗೆ ಮಗನಲ್ಲಿ 8 ಸಾವಿರ ರೂ ಹಣವನ್ನು ಕೇಳಿದ್ದರು.ದೊಡ್ಡಮ್ಮ ನ ಮನೆಯಿಂದ 4 ಸಾವಿರ ರೂ ಹಣವನ್ನು ಅಮ್ಮನಿಗೆ ನೀಡಲು ಎಂದು ಮನೆಗೆ ಹೋದಾಗ ಮನೆಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ಮೃತರ ಮಗಳಾದ ಕುಮಾರಿ ಕೃತಿಕಾ ಗ್ರಾಮಾಂತರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು