Sunday, January 19, 2025
ಉಡುಪಿಕುಂದಾಪುರಸುದ್ದಿ

ಕುಂದಾಪುರದ ಶ್ರೇಯಸ್ಸ್ ಇನ್ ಸಭಾಂಗಣದಲ್ಲಿ  ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ,ಬೈಂದೂರು ವಲಯದ ವತಿಯಿಂದ ನಡೆದ canon ಕಾರ್ಯಗಾರ – ಕಹಳೆ ನ್ಯೂಸ್

ಕುಂದಾಪುರ: ತನ್ನದೆಯಾದ ಕಲ್ಪನೆಯ ಮೂಲಕ ಛಾಯಾಗ್ರಹಣ ಮಾಡುದರ ಮೂಲಕ ಒಂದೋಂದು ಚಿತ್ರಗಳಿಗು ಅವಿನಾಭಾವ ಸಂಭಂಧ ಸೃಷ್ಟಿ ಮಾಡುವ ಕಲಾಕಾರರು ಛಾಯಾಗ್ರಾಹಕರು.ಯಾವುದೇ ಚಿತ್ರ ಕೇವಲವಲ್ಲ ಹಾಗೂ ಆ ಚಿತ್ರವನ್ನು ಸೃಷ್ಟಿಸಿದ ಕಲಾವಿದ,ಛಾಯಾಗ್ರಾಹಕ ಯಾವತ್ತು ಕೇವಲ ಅನ್ನಿಸಿಕೊಳ್ಳುದಿಲ್ಲ ಸಮಾಜದಲ್ಲಿ ಛಾಯಗ್ರಾಹಕರ ಮೌಲ್ಯ ಅಪಾರವಾದದ್ದು ಎಂದು ಉದಯವಾಣಿಯ ಕುಂದಾಪುರದ ವರದಿಗಾರರಾದ ಲಕ್ಷ್ಮೀ ಮಚ್ಚಿನ ನುಡಿದರು.

ಅವರು ಕುಂದಾಪುರದ ಶ್ರೇಯಸ್ಸ್ ಇನ್ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ,ಬೈಂದೂರು ವಲಯದ ವತಿಯಿಂದ ಆಯೋಜಿಸಲಾದ canon ಕಾರ್ಯಗಾರವನ್ನು ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೀವಾಕರ ಶೆಟ್ಟಿ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಕುಂದಾಪುರ,ಬೈಂದೂರು ವಲಯ ವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭದಲ್ಲಿ ಮ್ಯಾತಿಯು canon ತರಬೇತುದಾರ, ಅಜಯ್ ವ್ಯವಹಾರ ವ್ಯವಸ್ಥಾಪಕ,ಸಂಘದ ಗೌರವಾಧ್ಯಕ್ಷರಾದ ಶ್ರೀಧರ್ ಹೆಗ್ಡೆ,ಸಲಹಾ ಸಮಿತಿ ಆದ್ಯಕ್ಷ ದಿನೇಶ್ ಗೋಡೆ,ನಿಕಟ ಪೂರ್ವ ಅಧ್ಯಕ್ಷ ದೊಟ್ಟಯ್ಯ ಪೂಜಾರಿ,ಪ್ರಧಾನ ಕಾರ್ಯದರ್ಶಿ ದಿನೇಶ್ ರಾಯಪ್ಪನ ಮಠ,ಕೋಶಾಧಿಕಾರಿ ಹರೀಶ್ ಹಂಗಳೂರು ಮೊದಲಾದವರು ಉಪಸ್ಥಿತರಿದ್ದರು.

ಶ್ರೀನಿವಾಸ್ ಶೇಟ್ ಪ್ರಾರ್ಥಿಸಿದರು,ವಿವಾಕರ ಶೆಟ್ಟಿ ಸ್ವಾಗತಿಸಿದರು,ಹರೀಶ್ ಹಂಗಳೂರು ವಂದಿಸಿದರು.