Sunday, January 19, 2025
ದಕ್ಷಿಣ ಕನ್ನಡಪುತ್ತೂರುಸಿನಿಮಾಸುದ್ದಿ

ಖಡಕ್ ಪೋಲೀಸ್ ಅಧಿಕಾರಿಯಾಗಿ ಕಿಶೋರ್ ಕುಮಾರ್ ಪುತ್ತೂರು ನಟನೆ ಹಾಗೂ ನಿರ್ಮಾಣದ “Ella” ಚಿತ್ರ ಇಂದು MX player ಬಿಡುಗಡೆ..!! – ಕಹಳೆ ನ್ಯೂಸ್

ಪ್ರಪ್ರಥಮ ಬಾರಿಗೆ ಮಂಗಳೂರಿನಲ್ಲೆ ಮಂಗಳೂರಿನವರೆ ನಿರ್ಮಿಸಿ, ನಿರ್ದೇಷಿಸಿರುವ ಬಾಲಿವುಡ್ ಚಲನಚಿತ್ರ “Ella” ನಾಳೆ ಮಧ್ಯಾಹ್ನ 12 ಗಂಟೆಗೆ MX player ನಲ್ಲಿ ಬಿಡುಗಡೆ ಆಗಲಿದೆ.


8 ವರ್ಷದ ಮಗು ಒಂದು ತನ್ನ ಗೆಳೆಯ ಆಮೆಯನ್ನು ಸಮಾಜದ ಕಟುಕರಿಂದ ರಕ್ಷಿಸುವ ಪ್ರಯತ್ನ ಹಾಗೂ ಅವಳ ಮುಗ್ದ ಹೋರಾಟ ಚಿತ್ರದ ಶೀರ್ಷಿಕೆಯಾಗಿದ್ದು. ಖ್ಯಾತ ಬಾಲಿವುಡ್ ನಟ ಮಕರಂದ ದೇಶಪಾಂಡೆ, ಇಶಾ ತಲ್ವಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಂತರ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪರಶು ಲ್ಯಾಂಡ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಹೆಸರಿನಲ್ಲಿ ಪ್ರತೀಕ್ ಶೆಟ್ಟಿ, ಕಿಶೋರ್ ಕುಮಾರ್ ಪುತ್ತೂರು, ವೋಲ್ಸಿ ತಾವ್ರೋ, ಉದಯ್ ಶೆಟ್ಟಿ ಯವರು ಈ ಚಿತ್ರವನ್ನು ನಿರ್ಮಿಸಿದ್ದು ರೋಷನ್ ಫೆರ್ನಾಂಡಿಸ್ ರಚಿಸಿ ನಿರ್ದೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು