Recent Posts

Monday, January 20, 2025
ಉಡುಪಿಸುದ್ದಿ

ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ನೇತ್ರತ್ವದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಿಗೆ ಬಿಳ್ಕೋಡುಗೆ- ಕಹಳೆ ನ್ಯೂಸ್

ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಮಾಜ ಸೇವಕ ನಿತ್ಯಾನಂದ ಒಳಕಾಡು ನೇತ್ರತ್ವದಲ್ಲಿ, ಹಿರಿಯ ಸಿವಿಲ್ ನ್ಯಾಯಾಧೀಶರು, ಮತ್ತು ಉಡುಪಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಅವರನ್ನು, ಚಿತ್ತರಂಜನ್ ಸರ್ಕಲ್ ಬಳಿಯಲ್ಲಿರುವ ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಬಿಳ್ಕೋಡುಗೆ ಸಮಾರಂಭವು ಶುಕ್ರವಾರ ನಡೆಯಿತು. ಶರ್ಮಿಳಾ ಎಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲಾ ನ್ಯಾಯಾಧೀಶೆ ಮುಮ್ತಾಜ್, ಮಿತ್ರ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವನಿತಾ, ಉದ್ಯಮಿ ಉದಯ ಕುಮಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಪ್ರಾಸ್ತವನೆಗೈದರು. ಅಮೃತ ವಂದಿಸಿದರು, ಸಂಗೀತ ನಿರೂಪಿಸಿದರು.ಪಾಕತಜ್ಞ ಶ್ರೀಧರ್ ಭಟ್ ಪಲಾಹಾರವನ್ನು ಉಚಿತವಾಗಿ ನೀಡಿದರು, ಸ್ಮರಣಿಕ ದಿವಾಕರ್ ಸನಿಲ್ ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು