Recent Posts

Monday, January 20, 2025
ಉಡುಪಿಸುದ್ದಿ

ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಖ್ಯಾತ ಬಾಲ ಕಲಾವಿದೆ ಗಂಗಾ ಹಾಗು ಅನುರೂಫ್ ಅಪರೂಪದ ವಯೋಲಿನ್ ನಾದಕ್ಕೆ ಮನಸೋತ ಕೃಷ್ಣನಗರಿ -ಕಹಳೆ ನ್ಯೂಸ್

ಉಡುಪಿ: ಖ್ಯಾತ ಬಾಲ ಕಲಾವಿದೆ ಹತ್ತು ವರ್ಷದ ಕುಮಾರಿ ಗಂಗಾ ಶಶಿಧರನ್ ರವರ ವಯೋಲಿನ್ ವಾದನ ಕಛೇರಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಕಿಕ್ಕಿರಿದ ಜನ ಸಂದಣಿಯ ನಡುವೆ ನಡೆಯಿತು.

ಅಪಾರ ಜನಪ್ರಿಯತೆ ಯನ್ನು ಪಡೆದುಕೊಂಡಿರುವ ಈ ಬಾಲ ಕಲಾವಿದೆಯನ್ನು ಪೂಜ್ಯ ಪರ್ಯಾಯ ಹಿರಿಯ ಮತ್ತು ಕಿರಿಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದವನ್ನು ನೀಡಿ, ಗೌರವಿಸಿ ಹರಸಿದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗುರು ವಿದ್ವಾನ್ ಶ್ರೀ ಅನುರೂಪ್ ಹಾಗು ಪಕ್ಕವಾದ್ಯದಲ್ಲಿ ಸಹಕರಿಸಿದರನ್ನು ಪ್ರಸಾದ ನೀಡಿ ಗೌರವಿಸಿದರು. ರಾಜಾಂಗಣ ದಲ್ಲಿ ನಡೆದ ಕಿಕ್ಕಿರಿದ ಕಲಾಪ್ರಿಯರು ಪಿಟೀಲುವಾದನದ ಸುಧೆಯನ್ನು ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆಯ ನಿರ್ದೇಶಕ ಡಾ.ಹರಿಶ್ಚಂದ್ರ ರವರು ತಮ್ಮ ಆಸ್ಪತ್ರೆಯ 30 ನೇ ವರ್ಧಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದರು.

ಆಸ್ಪತ್ರೆಯ ವತಿಯಿಂದ ಗುರು ಹಾಗು ಶಿಷ್ಯೆಯನ್ನು ಅದ್ದೂರಿಯಾಗಿ ಅಭಿನಂದಿಸಲಾಯಿತು. ಶ್ರೀ ಮಠದ ವತಿಯಿಂದ ಎಂ. ಹರಿಶ್ಚಂದ್ರ, ಲಕ್ಷ್ಮಿ ದಂಪತಿಗಳನ್ನು ಪರ್ಯಾಯ ಶ್ರೀಪಾದರು ಶ್ರೀಕೃಷ್ಣ ಪ್ರಸಾದ ನೀಡಿ ಅಭಿನಂದಿಸಿದರು.

ಕುಮಾರಿ ಗಂಗಾ ಳಿಗೆ ಭಗವದ್ಗೀತೆಯನ್ನು ಬರೆಯುವ ಕೋಟಿ ಗೀತಾ ಲೇಖನ ಯಜ್ಞದೀಕ್ಷೆಯನ್ನು ಪೂಜ್ಯ ಶ್ರೀಪಾದರು ನೀಡಿ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಡಾ. ಪಂಚಮಿ ಹರಿಶ್ಚಂದ್ರ, ಶ್ರೀ ಮಠದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್ ಭಟ್ ಉಪಸ್ಥಿತರಿದ್ದರು. ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಸಜನಿ ನಿರೂಪಿಸಿದರು.