Recent Posts

Monday, January 20, 2025
ಉಡುಪಿಸುದ್ದಿ

ಅದಿತಿ ಆರ್ಟ್ ಗ್ಯಾಲರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಕಲ್ಲಚ್ಚು ಕಲಾ ಕೃತಿಗಳ ಪ್ರದರ್ಶನ – ಕಹಳೆ ನ್ಯೂಸ್

ಉಡುಪಿ : ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು ಅನಿವಾರ್ಯ ಎಂದು ನೇಮಿರಾಜ ಶೆಟ್ಟಿ ಅಭಿಪ್ರಾಯ ಪಟ್ಟರು.

ಅವರು ಅದಿತಿ ಆರ್ಟ್ ಗ್ಯಾಲರಿಯಲ್ಲಿ ಮೇ 17 ರಂದು ಆರಂಭವಾದ ಮೂರು ದಿನಗಳ ಕಾಲ ಜರಗಲಿರುವ ಕಲ್ಲಚ್ಚು ಕಲಾ ಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದಲ್ಲಿ ಮುದ್ರಣ ಮಾಧ್ಯಮದ ಇತಿಹಾಸದ ಬಗ್ಗೆ ಹಾಗೂ ಕಲಾಕೃತಿಗಳ ಆಳವಾಗಿ ಬೆಳಕು ಚೆಲ್ಲಿದ ಅವರು ರವಿಮರ್ಮ ಅವರ ಕೊಡುಗೆಯನ್ನು ಪ್ರಸಂಶಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಾವಿದ ಡಾ. ಜನಾರ್ಧನ ಹಾವಂಜೆ ಮಾತನಾಡಿ ಸಮಾಜಿಕ ಬದಲಾವಣೆಗಾಗಿ ದೇವರನ್ನು ಮನುಷ್ಯರೂಪದಲ್ಲಿ ತೋರಿಸಿದ ಕಲಾವಿದ ರವಿ ವರ್ಮಾ ಅವರ ಕೊಡುಗೆ ಅಪಾರ. ಕಲ್ಲಚ್ಚು ಪ್ರತಿಗಳ ತಳಸ್ಪರ್ಶಿ ಅಧ್ಯಯನವಾಗಬೇಕು ಎಂದು ಹೇಳಿದರು.

ಚಿತ್ರ ಕೃತಿಗಳ ನಿರ್ಮಾಣದ ಜತೆಗೆ ಕಲಾಕೃತಿಗಳು ಸಾಮಾನ್ಯರಿಗೂ ತಲುಪುವಂತೆ ಮಾಡುವುದು ಒಂದು ವಿಶಿಷ್ಟ ಕಲೆ. ಪ್ರಾಚೀನ ಕಾಲದ ಮುದ್ರಣ ತಂತ್ರಜ್ಞಾನವನ್ನು ಬಳಸಿ ಬಹು ಪ್ರತಿಗಳ ನಿರ್ಮಾಣ ಮಾಡಿದ ಅನೇಕ ಕಲಾವಿದರ ಸಾಲಿಗೆ ರವಿ ವರ್ಮ ಅವರೂ ಸೇರುತ್ತಾರೆ ಎಂದು ಅದಿತಿ ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ಪ್ರಸ್ತಾವನೆಯಲ್ಲಿ ತಿಳಿಸಿದರು.

ವಿಶ್ವಸ್ಥರಾದ ವಿದುಷಿ ಪ್ರತಿಮಾ ಆಚಾರ್ಯ, ಶ್ರೀನಿವಾಸ್, ಪ್ರಸನ್ನ ಶ್ರೀನಿವಾಸ್, ವಿದುಷಿ ಪ್ರವೀಣಾ ಮೋಹನ್ ಉಪಸ್ಥಿತರಿದ್ದರು.
ಕಲಾ ಪ್ರದರ್ಶನವು ಮೇ 19 ರವರೆಗೆ ಬೆಳಗ್ಗೆ 11 ರಿಂದ ಸಂಜೆ 7 ರವರೆಗೆ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗಿದೆ.

ಫೋಟೋ ಕ್ಯಾಪ್ಶನ್ :

ಅದಿತಿ ಕಲಾ ಗ್ಯಾಲರಿಯಲ್ಲಿ ಮೇ 17 ರಂದು ಆರಂಭವಾದ ಮೂರು ದಿನಗಳ ಕಲ್ಲಚ್ಚು ಪ್ರದರ್ಶನವನ್ನು ಮಂಗಳೂರಿನ ನೇಮಿರಾಜ್ ಶೆಟ್ಟಿ ಉದ್ಘಾಟಿಸಿದರು. ಉಡುಪಿಯ ಪ್ರಸಿದ್ಧ ಕಲಾವಿದ ಮತ್ತು ಸಂಶೋಧಕ ಡಾ. ಜನಾರ್ದನ ಹಾವಂಜೆ, ಗ್ಯಾಲರಿಯ ಆಡಳಿತ ವಿಶ್ವಸ್ಥರಾದ ಡಾ. ಕಿರಣ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.