Sunday, January 19, 2025
ಸುದ್ದಿ

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಟಿ ಪವಿತ್ರಾ ಜಯರಾಂ : ಗೆಳತಿ ಸಾವು ಅರಗಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾದ ಸಹನಟ – ಕಹಳೆ ನ್ಯೂಸ್

ಹೈದರಾಬಾದ್ : ಕೆಲದಿನಗಳ ಹಿಂದಷ್ಟೇ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ಇದೀಗ ಆಕೆಯ ಗೆಳೆಯ ಚಂದು ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರ(ಮೇ.12 ರಂದು) ಮಹೆಬೂಬ್‌ನಗರ ಜಿಲ್ಲೆಯ ಭೂತ್‌ಪುರ ಪುರಸಭೆ ವ್ಯಾಪ್ತಿಯ ಶೇರಿಪಲ್ಲಿ (ಬಿ) ಗ್ರಾಮದ ಬಳಿ, ಪವಿತ್ರಾ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ತೀವ್ರ ಗಾಯಗೊಂಡು ಪವಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಮಯದಲ್ಲಿ ಕಾರಿನಲ್ಲಿದ್ದ ಸಹನಟ ಚಂದು ಸೇರಿದಂತೆ ಮೂವರಿಗೆ ಗಾಯಗಳಾಗಿತ್ತು. ಪವಿತ್ರಾ ಅವರ ಅಂತ್ಯಕ್ರಿಯೆಗೆ ಗಾಯ ಆಗಿದ್ದರೂ ಚಂದು ಬಂದಿದ್ದರು. ಈ ವೇಳೆ ತನ್ನ ಸ್ನೇಹಿತೆಯನ್ನು ಕಳೆದುಕೊಂಡ ದುಃಖದಲ್ಲಿ ಭಾವುಕರಾಗಿ ಮಾತನಾಡಿದ್ದರು.

ಮೇ.18 ರಂದು ಹೈದರಾಬಾದ್ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಮಣಿಕೊಂಡದಲ್ಲಿರುವ ತನ್ನ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕಿರುತೆರೆ ನಟ ಚಂದು 2015ರಲ್ಲಿ ಶಿಲ್ಪಾ ಎಂಬ ಯುವತಿಯನ್ನು ಮದುವೆಯಾಗಿದ್ದರು. ಆತನಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಪವಿತ್ರಾ ಜಯರಾಂ ಪರಿಚಯದ ಬಳಿಕ ಶಿಲ್ಪಾ ಜೊತೆಗೆ ದೂರ ಉಳಿದರು. ಆ ಬಳಿಕ ಪವಿತ್ರಾ ಜಯರಾಂ ಮತ್ತು ಚಂದು ಒಟ್ಟಿಗೆ ವಾಸಿಸುತ್ತಿದ್ದರು ಎನ್ನಲಾಗುತ್ತಿದೆ. ಪವಿತ್ರಾ ಸಾವನ್ನು ಅರಗಿಸಿಕೊಳ್ಳಲಾಗದೆ ಚಂದು ತನ್ನ ಮಣಿಕೊಂಡದಲ್ಲಿರುವ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪೊಲೀಸರು ಚಂದು ಆತ್ಮಹತ್ಯೆ ಕುರಿತು ತನಿಖೆ ನಡೆಸುತ್ತಿದ್ದಾರೆ.