Sunday, January 19, 2025
ಕುಂದಾಪುರಸುದ್ದಿ

“ಸಿಡಿಲಿನಿಂದ ಹಾನಿಯಾದ ಮನೆಗೆ ತಹಶಿಲ್ದಾರ್ ಪ್ರತಿಭಾ ಆರ್ ಭೇಟಿ : ಪರಿಹಾರದ ಭರವಸೆ” – ಕಹಳೆ ನ್ಯೂಸ್

ನಿನ್ನೆ ರಾತ್ರಿ ಸಿಡಿಲು ಬಡಿದು ಬೆಂಕಿ ಹತ್ತಿಕೊಂಡು ಕುರ್ಕಾಲು ಗ್ರಾಮದ ಪ್ರಭಾಕರ ಸೇರಿಗಾರ ರವರ ಮನೆ ಭಾಗಶಃ ಹಾನಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆ ನಡೆದ ಸ್ಥಳಕ್ಕೆ ಬೇಟಿ ನೀಡಿದ ಮಾನ್ಯ ತಹಶಿಲ್ದಾರ್ ಪ್ರತಿಭಾ ಆರ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳಾದ ಲೆಸ್ಟನ್ ಮತ್ತು ಸಂತ್ರಸ್ತರಿಗೆ ಸಾಂತ್ವನದ ಜೊತೆಗೆ ಆದ ನಷ್ಟವನ್ನು ವರದಿ ಮೇರೆಗೆ ಪರಿಶೀಲಿಸಿ ಪರಿಹಾರ ಒದಗಿಸುವಲ್ಲಿ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾಜದ ಪ್ರತಿಯೊಬ್ಬರ ಕಷ್ಟದಲ್ಲಿ ನಾವೆಲ್ಲರೂ ಮಾನವೀಯತೆ ತೋರಿಸಬೇಕು. ಹಾನಿಯ ಪ್ರಮಾಣದ ಬಗ್ಗೆ ವರದಿ ಸಲ್ಲಿಸಲು ಗ್ರಾಮ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ ಅವರು ಪ್ರಕೃತಿ ವಿಪತ್ತನ್ನು ಎದುರಿಸಲು ತಾಲ್ಲೂಕು ಆಡಳಿತ ಸದಾ ಸನ್ನದ್ದ ಎಂದು ಹೇಳಿದರು. ಯಾವುದೇ ಪ್ರಕೃತಿ ವಿಪತ್ತಿನ ಸಂದರ್ಭದಲ್ಲಿ ಸಾರ್ವಜನಿಕರು ತಾಲ್ಲೂಕು ಆಡಳಿತವನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.