ಸುಬ್ರಮಣ್ಯ :ಮೂಲತಹ ಆಂದ್ರಪ್ರದೇಶದ ಅಮೇರಿಕಾದ ಉದ್ಯಮಿಯಾದ ಶಾಯಿ ಶ್ರೀನಿವಾಸ್ ಅವರು ದೇವಸ್ಥಾನಕ್ಕೆ ಬಂಡಿ ರಥವನ್ನು ಮೇ/ 20/ 2024 ರಂದು ದೇಣಿಗೆಯಾಗಿ ನೀಡಲಿದ್ದಾರೆ. ಇದು ಸುಮಾರು ಹದಿನಾರು (16ಜಿಣ) ಫೀಟ್ ಎತ್ತರವಿದ್ದು ಸಗವಾಣಿ, ಹೆಬ್ಬಾಳಸು, ಚಿಪು9 ಈ ಮೂರು ಮರಗಳಿಂದ ನಿರ್ಮಿಸಲಾಗಿದೆ.
ಇದು ಸುಮಾರು 12.5 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ ಇದನ್ನು ಕೋಟೇಶ್ವರ ಶಿಲ್ಪಿಗಳಾದ ರಾಜಗೋಪಲಾಚರ್ ರವರ ನೇತೃತ್ವದಲ್ಲಿ ಕೆತ್ತನೆ ಕೆಲಸವನ್ನು ಮಾಡಿ ಪೂರ್ಣ ಗೊಂಡಿರುತ್ತದೆ. ಮೇ 20 ತಾರೀಕಿಗೆ ಸುಮಾರು 3ಗಂಟೆ ಹೊತ್ತಿಗೆ ಸುಬ್ರಹ್ಮಣ್ಯಕ್ಕೆ ತಲುಪಲಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ, ಆಡಳಿತಧಿಕಾರಿ, ದೇವಸ್ಥಾನದ ಸಿಬ್ಬಂದಿ ವರ್ಗದವರು, ಊರಿನ ಮತ್ತು ಪರಊರಿನ ಭಕ್ತರು ಸೇರಿ ನೂತನ ಬಂಡಿ ರಥವನ್ನು ಸ್ವಾಗತಿಸಬೇಕಾಗಿ ಬಂಡಿರಥದ ದಾಣಿಗಳ ಆತ್ಮೀಯರಾದ ಮೋಹನ್ ದಾಸ್ ರೈ ಯವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಸತೀಶ್ ಕೂಜುಗೋಡು, ವಿಮಲಾ ರಂಗಯ್ಯ,ಮಾದವ , ಪವನ್ ಉಪಸ್ಥಿತಿಯಿದ್ದರು.