ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವೇಳೆ ತಪಾಸಣೆಗಾಗಿ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ಲಾರಿ ಸಹಿತ ಮರಳನ್ನು ಬಂಟ್ವಾಳ ನಗರ ಪೊಲೀಸರು ವಶಪಡಿಸಿಕೊಂಡ ಘಟನೆ ಬಂಟ್ವಾಳ ನಾರಾಯಣ ಗುರು ಸರ್ಕಲ್ ನಲ್ಲಿ ಬಳಿ ನಡೆದಿದೆ.
ಆರೋಪಿಯನ್ನು ಟಿಪ್ಪರ್ ಚಾಲಕ ಬೋಳಂತೂರು, ಬಂಟ್ವಾಳ ಚಾಲಕ ಮನ್ಸೂರು (26) ಹಾಗೂ ಮಾಲಕ ಅಶ್ರಫ್ ಕೈಕಂಬ ಎಂದು ಗುರುತಿಸಲಾಗಿದೆ.
ಪೊಲೀಸ್ ಸಹಾಯಕ ಉಪ ನಿರೀಕ್ಷಕರು, ಬಂಟ್ವಾಳ ನಗರ ಪೊಲೀಸ್ ಠಾಣೆರವರು ಸಿಬ್ಬಂದಿಗಳೊAದಿಗೆ, ಬಂಟ್ವಾಳ ನಾರಾಯಣ ಗುರು ಸರ್ಕಲ್ ನಲ್ಲಿ ಬಳಿ ವಾಹವನ್ನು ತಪಾಸಣೆ ವೇಳೆ ತಪಾಸಣೆಗಾಗಿ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸುತ್ತಾರೆ. ಈ ವೇಳೆ ಲಾರಿಯನ್ನು ಪರಿಶೀಲಿಸಿದಾಗ, ಅದರಲ್ಲಿ ಅಂದಾಜು 3 ಯೂನಿಟ್ ಮರಳು ಲೋಡ್ ಮಾಡಿರುವುದು ಕಂಡುಬAದಿರುತ್ತದೆ. ಈ ಬಗ್ಗೆ ಲಾರಿ ಚಾಲಕ ಮೊಹಮ್ಮದ್ ಮನ್ಸೂರು ಎಂಬಾತನಲ್ಲಿ ವಿಚಾರಿಸಿದಾಗ, ಮರಳನ್ನು ವಳಚ್ಚಿಲ್ ಎಂಬಲ್ಲಿ ನೇತ್ರಾವತಿ ನದಿಯಿಂದ ಯಾವುದೇ ಅನುಮತಿಯಿಲ್ಲದೆ ಅಕ್ರಮವಾಗಿ, ತೆಗೆದು ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ತಿಳಿಸಿರುತ್ತಾನೆ. ಲಾರಿಯನ್ನು ಮರಳಿನ ಸಹಿತವಾಗಿ ವಶಕ್ಕೆ ಪಡೆದು, ಆರೋಪಿ ಚಾಲಕ ಹಾಗೂ ಲಾರಿ ಮಾಲಿಕನಾದ ಅಶ್ರಫ್ ಕೈಕಂಬ, ಬಿಸಿರೋಡ್, ಬಂಟ್ವಾಳ ಎಂಬಾತನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ..