Sunday, January 19, 2025
ಆರೋಗ್ಯದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊ0ಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್ ನ್ನು ಉದ್ಘಾಟಿಸಿದ ಡಾ.ದೀಪಿಕಾ ಶೆಟ್ಟಿ – ಕಹಳೆ ನ್ಯೂಸ್

ಮೂಡುಬಿದಿರೆ: ಸೌಂದರ್ಯವರ್ಧಕ ಚಿಕಿತ್ಸಾಲಯಗಳು ಈ ಕಾಲದ ಪ್ರತಿಯೊಬ್ಬರ ಕನಿಷ್ಠ ಅಗತ್ಯೆಯೆ ಹೊರತು ಐಷಾರಾಮಿ ಜೀವನ ಪದ್ದತಿಯಲ್ಲ ಎಂದು ಮುಂಬೈಯ ಡೆರ್ಮಟೊ ಕಾಸ್ಮಟಾಲಜಿಸ್ಟ್ ಡಾ.ದೀಪಿಕಾ ಶೆಟ್ಟಿ ತಿಳಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಮೂಡುಬಿದಿರೆ ಆಳ್ವಾಸ್ ಹೆಲ್ತ್ ಸೆಂಟರ್ ಪಕ್ಕದಲ್ಲಿ ನೂತನವಾಗಿ ಪ್ರಾರಂಭಗೊAಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಇಂದು ಪ್ರತಿಯೊಬ್ಬರು ತಮ್ಮ ತ್ವಚೆಗೆ ಹಾಗೂ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು, ಇಂತಹ ವೈಯಕ್ತಿಕ ಯೋಗ ಕ್ಷೇಮದ ಸೇವೆಯನ್ನು ನೀಡುವ ಚಿಕಿತ್ಸಾಲಯಗಳು ಈ ಕಾಲದ ಮೂಲಭೂತ ಅಗತ್ಯಗಳಾಗಿ ಮಾರ್ಪಟ್ಟಿವೆ. ಈ ಕ್ಷೇತ್ರದ ಸೇವೆ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷರಿಗೂ ಅಗತ್ಯವೆನ್ನುವಷ್ಟು ಬೆಳೆದಿದೆ ಎಂದ ಹರ್ಷ ವ್ಯಕ್ತ ಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆವಹಿಸಿದರು. ಮೂಡುಬಿದಿರೆಯಲ್ಲಿ ಸೌಂದರ್ಯ ಪ್ರಜ್ಞೆಗೆ ಹೊಸ ಪರಿಭಾಷೆ ಬರೆದವರು ಡಾ ಎಂ ಮೋಹನ ಆಳ್ವರು. ಆಧುನಿಕತೆಯ ಈ ಕಾಲಘಟ್ಟದಲ್ಲಿ ಇಂತಹ ವ್ಯವಸ್ಥೆಗಳು ಬಹಳ ಅಗತ್ಯವೆನಿಕೊಂಡಿವೆ. ನಾಲ್ಕು ದಶಕಗಳ ಹಿಂದೆ ಡಾ.ಆಳ್ವರು ಮೂಡುಬಿದಿರೆಯಲ್ಲಿ ಕ್ಲಿನಿಕ್ ಸ್ಥಾಪಿಸಿ ಆ ಕಾಲದ ಅಗತ್ಯತೆಯನ್ನು ಪೂರೈಸಿದರು. ಇದೀಗ ಅವರ ಮಕ್ಕಳು ತಂದೆಯ ಕನಸನ್ನು ಯೋಗ್ಯರೀತಿಯಲ್ಲಿ ನನಸು ಮಾಡುತ್ತಿದ್ದಾರೆ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಮಾತನಾಡಿ, ಮನುಷ್ಯನಿಗೆ ಪ್ರತಿ ಅಂಗವು ಬಹಳ ಮುಖ್ಯವಾಗಿದ್ದು, ಅವುಗಳಲ್ಲಿ ತ್ವಚೆಯ ಸಂರಕ್ಷಣೆಗೆ ಇಂದು ಹಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಆ ನೆಲೆಯಲ್ಲಿ ಮೂಡುಬಿದಿರೆಯಲ್ಲಿ ನೂತನವಾಗಿ ಪ್ರಾರಂಭಗೊಂಡ ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್ ಉತ್ತಮ ಸೇವೆಯನ್ನು ನೀಡಬಲ್ಲದು ಎಂದರು.

ಉದ್ಯಮಿಗಳಾದ ಅಬುಲಾಲ, ನಾರಾಯಣ ಪಿ.ಎಂ, ಪುರಸಭೆ ಸದಸ್ಯ ಪಿ.ಕೆ ಥೋಮಸ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ಡಾ.ವಿನಯ ಆಳ್ವ, ಆಳ್ವಾಸ್ ಹೆಲ್ತ್ ಸೆಂಟರ್‌ನ ಸ್ತ್ರೀರೋಗ ತಜ್ಞೆ ಡಾ.ಹನಾ ಶೆಟ್ಟಿ ಉಪಸ್ಥಿತರಿದ್ದರು.

ಡಾ.ಕ್ಷಮಾ ಜೈನ್ ನಿರೂಪಿಸಿದರು. ಉಪನ್ಯಾಸಕಿ ಡಾ.ಸುಧಾರಾಣಿ ಸ್ವಾಗತಿಸಿ, ಮೆಡಿಕಲ್ ಕಾಸ್ಮಟಾಲಜಿಸ್ಟ್ ಡಾ.ಸುಶ್ಮಾ ಕರ್ಕೇರ ವಂದಿಸಿದರು.

ಆಳ್ವಾಸ್‌ನಲ್ಲಿ ನಾಲ್ಕು ಹೊಸ ಕೋರ್ಸ್:
ಆಳ್ವಾಸ್ ಎಸ್ಥೆಟಿಕ್ ರಿಜುವನೇಶನ್ ಸೆಂಟರ್‌ನಿಂದ ನಾಲ್ಕು ನೂತನ ಕೋರ್ಸ್ಗಳನ್ನು ಆರಂಭಿಸಲಾಗುತ್ತಿದ್ದು, ಜೂನ್ 15ರಿಂದ ಪ್ರಾರಂಭವಾಗಲಿವೆ. ಆರು ತಿಂಗಳ ಫೆಲೋಶಿಫ್ ಇನ್ ಮೆಡಿಕಲ್ ಕಾಸ್ಮಟಾಲಜಿ, ಆರು ತಿಂಗಳ ಫೆಲೋಶಿಫ್ ಇನ್ ಎಸ್ಥೆಟಿಕ್ ಮೆಡಿಸಿನ್, ಎಂಬಿಬಿಎಸ್, ಬಿಎಎಮ್‌ಎಸ್, ಬಿಎಚ್‌ಎಮ್‌ಎಸ್ ಹಾಗೂ ಬಿಡಿಎಸ್ ಪಧವೀದರರಿಗೆ ಮೂರು ತಿಂಗಳ ಪೋಸ್ಟ್ಗ್ರಾಜ್ಯುವೇಟ್ ಡಿಪ್ಲೋಮಾ ಇನ್ ಕಾಸ್ಮಟೋಲಾಜಿ ಹಾಗೂ ಬಿಎಸ್ಸಿ ನರ್ಸಿಂಗ್ ಹಿನ್ನಲೆಯವರಿಗೆ ಒಂದು ತಿಂಗಳ ಸರ್ಟಿಫಿಕೆಟ್ ಕೋರ್ಸ್ – ಕಾಸ್ಮಟೋಲಾಜಿ ಪ್ರಾರಂಭವಾಗಲಿದೆ.