Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಸ್ವಾಮಿ ಕೊರಗಜ್ಜ ಕಲಾಕೇಂದ್ರ ಕಲ್ಲುರ್ಟಿಯಡ್ಕ-ಉಕ್ಕುಡ ಇದರ ಆಶ್ರಯದಲ್ಲಿ ಸಂಗಮ ಯುವಕ ಮಂಡಲ ಪಡಿಬಾಗಿಲಿನಲ್ಲಿ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನೆ – ಕಹಳೆ ನ್ಯೂಸ್

ವಿಟ್ಲ : ಶ್ರೀ ಸ್ವಾಮಿ ಕೊರಗಜ್ಜ ಕಲಾಕೇಂದ್ರ ಕಲ್ಲುರ್ಟಿಯಡ್ಕ-ಉಕ್ಕುಡ ಇದರ ಆಶ್ರಯದಲ್ಲಿ ಸಂಗಮ ಯುವಕ ಮಂಡಲ ಪಡಿಬಾಗಿಲು ಇಲ್ಲಿನ ಕಟ್ಟಡದಲ್ಲಿ ಇಂದುಶ್ರೀ ಆ.ಓ.ಏ ಕಲ್ಲುರ್ಟಿಯಡ್ಕ ಇವರ ಸಂಯೋಜಕತ್ವದಲ್ಲಿ ಮಕ್ಕಳ ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಉಕ್ಕುಡದ ಪುರಂದರದಾಸರೆAದೇ ಕರೆಯಲ್ಪಡುವ ಪ್ರಸಿದ್ಧ ಹಿರಿಯ ಭಜನೆಗಾರರಾದ ಶ್ರೀ ನಾರಾಯಣ ಶೆಟ್ಟಿಯವರ ದಿವ್ಯಹಸ್ತದಿಂದ ದೀಪ ಪ್ರಜ್ವಲನೆ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶ್ರೀ ಐತ್ತಪ್ಪನಾಯ್ಕ ಮುಖ್ಯೋಪಾಧ್ಯಾಯರು ಶ್ರೀ ಕೃಷ್ಣ ವಿದ್ಯೋದಯ ಅನುದಾನಿತ ಹಿ.ಪ್ರಾ.ಶಾಲೆ ಕಾನತ್ತಡ್ಕ, ನೀರ್ಕಜೆ ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಾಬುನಾಯ್ಕ ಭೀಮಾವರ, ಶ್ರೀ ಗೋಪಾಲನಾಯ್ಕ ಭೀಮಾವರ, ಭಜನಾ ತರಬೇತುದಾರರಾದ ಶ್ರೀ ನಾಗಪ್ಪ ಕೆಲಿಂಜ, ತರಬೇತಿ ಪಡೆಯುವ ಮಕ್ಕಳ ಪೋಷಕರು ಹಾಗೂ ತರಬೇತಿ ಪಡೆದುಕೊಳ್ಳುವ ಮಕ್ಕಳು ಭಾಗವಹಿಸಿದ್ದರು. ಈಗಾಗಲೇ 15 ಮಕ್ಕಳ ಸೇರ್ಪಡೆಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಕ್ಕಳು ಭಜನಾ ತರಬೇತಿ ಪಡೆಯಲು ಬರುವವರಿದ್ದಾರೆ. ಈ ಕುಣಿತ ಭಜನಾ ತರಬೇತಿಯು ಪ್ರತೀ ಆದಿತ್ಯವಾರ 4 ಗಂಟೆಯಿAದ 5 ಗಂಟೆಯ ತನಕ ಪಡಿಬಾಗಿಲಿನ ಸಂಗಮ ಯುವಕ ಮಂಡಲ ಕಟ್ಟಡದಲ್ಲಿ ನಡೆಯುತ್ತದೆ. ಆಸಕ್ತ ಮಕ್ಕಳು ಇನ್ನೂ ಸೇರಬಹುದಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ನಿರ್ವಹಣೆ ಹಾಗೂ ಧನ್ಯವಾದಗಳನ್ನು ದೀನೇಶ್ ಕಲ್ಲುರ್ಟಿಯಡ್ಕ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು