Friday, September 20, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ-ಕಹಳೆ ನ್ಯೂಸ್

ಬಂಟ್ವಾಳ;  ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಕಾರ್ಯಕರ್ತರ ಸಭೆ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಪದವೀಧರ ಹಾಗೂ ಶಿಕ್ಷಕರ ಎರಡು ಕ್ಷೇತ್ರದ ಚುನಾವಣೆಯಲ್ಲಿ ನಾವು ಗೆಲುವು ಪಡೆಯಬೇಕಾಗಿದೆ,ಈ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಅತ್ಯಂತ ಶೃದ್ದೆಯಿಂದ ಮಾಡುವಂತೆ ತಿಳಿಸಿದರು. ವಿಧಾನಸಭೆಯಲ್ಲಿ ಕೆಲವೊಂದು ಮಹತ್ವದ ಕಾರ್ಯಗಳು ಜಾರಿಯಾಗಬೇಕಾದರೆ ಗೆಲುವು ಅತ್ಯಂತ ಪ್ರಮುಖವಾಗಿದೆ ಎಂದು ತಿಳಿಸಿದರು.
ಬಾಕಿ ಎಲ್ಲಾ ಚುನಾವಣೆಗಿಂತ ಭಿನ್ನವಾದ ಚುನಾವಣಾ ಇದಾಗಿದ್ದು,ಜೊತೆಯಾಗಿ ಕೆಲಸ ಮಾಡಿದರೆ ಗೆಲುವು ನಿಶ್ಚಿತ ಎಂದು ಅವರು ತಿಳಿಸಿದರು.ಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಭಾವನಾತ್ಮಕವಾಗಿರುವ ಎರಡು ಕ್ಷೇತ್ರದ ಜನತೆ ಪಕ್ಷಕ್ಕೆ ಶಕ್ತಿ ನೀಡಿದವರು. ಮತದಾನದ ದಿನದವರೆಗೆ ಮತದಾರರ ಜೊತೆ ನಿರಂತರವಾಗಿ ವೈಯಕ್ತಿಕ ಸಂಪರ್ಕ ವಿರಿಸಿ, ಉತ್ತಮವಾದ ಸಂಬAಧವಿರಿಸಿ ವ್ಯವಸ್ಥಿತವಾಗಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದರೆ ಗೆಲುವು ಸಾಧ್ಯ ಎಂದು ಅವರು ತಿಳಿಸಿದರು.

ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಮಾತನಾಡಿ, ಪದವೀಧರ ಪರವಾಗಿ, ಧ್ವನಿಯಾಗಿ ಪಕ್ಷದ ಸೂಚನೆ ಪಾಲಿಸಿಕೊಂಡು ಕೆಲಸ ಮಾಡುತ್ತೇನೆ ಎಂದು ಅವರು ಭರವಸೆಯ ಮಾತು ನೀಡಿದರು. ಕಾರ್ಯಕರ್ತರ ಚುನಾವಣೆ ಇದಾಗಿದ್ದು, ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಬೋಜೆಗೌಡ ಅವರು ಮಾತನಾಡಿ, ಸಂಘಟನೆ ಮತ್ತು ಶಿಶ್ತುಗೆ ಇನ್ನೊಂದು ಹೆಸರು ಬಿಜೆಪಿಯಾಗಿದೆ. ಅಂತಹ ಪಕ್ಷದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ನಾಡು,ನುಡಿಯ ಜೊತೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಿದ್ದಾರೆ. ಪಠ್ಯ ಪುಸ್ತಕದ ವಿಚಾರದಲ್ಲಿ ರಾಜಕೀಯ ಸಲ್ಲದು, ಜೀವನ ಮೌಲ್ಯವನ್ನು ಕಾಪಾಡುವ ಪೂರಕವಾದ ಶಿಕ್ಷಣ ನೀಡಿದಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ತಿಳಿಸಿದರು. ಹೊಂದಾಣಿಕೆ ಶಾಶ್ವತವಾಗಿ ಇರಬೇಕುಅದಕ್ಕೆ ಎನ್.ಡಿ.ಎ.ಕೂಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಜಾಹೀರಾತು

ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ , ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು, ರಾಜಕೀಯವಾಗಿ ಅಧಿಕಾರವನ್ನು ಕಳೆದುಕೊಳ್ಳುವುದು ಸುಲಭ, ಬಳಿಕ ಅಧಿಕಾರ ಪಡೆಯುವುದು ಅಷ್ಟು ಸುಲಭವಲ್ಲ,ಹಾಗಾಗಿ ಎಲ್ಲರನ್ನು ಚುನಾವಣೆಯಲ್ಲಿ ತೊಡಗಿಸಿಕೊಂಡು ಗೆಲುವು ಸಾಧಿಸಬೇಕು ಎಂದು ಅವರು ತಿಳಿಸಿದರು.

ಉಡುಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.

ಬಂಟ್ಚಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್ ಕೋಟ್ಯಾನ್,ಮಾಜಿ ಸಚಿವ ನಾಗರಾಜ ಶೆಟ್ಟಿ, ರಾಜ್ಯ ಪ್ರಕೋಷ್ಟದ ಸಂಚಾಲಕ ದತ್ತಾತ್ರೇಯ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷೆ ಪೂಜಾ ಪೈ,ಮಹಿಳಾ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಡಾ|ಮಂಜುಳಾ ಎ.ರಾವ್,ಜಿಲ್ಲಾ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ ನಾರಾಯಣ,ಜಿಲ್ಲಾ ಸಂಚಾಲಕ ವಿಕಾಸ್ ಪುತ್ತೂರು, ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ,ಚುನಾವಣಾ ಸಹಸಂಚಾಲಕ ಸುರೇಶ್ ಕೋಟ್ಯಾನ್, ಜೆ.ಡಿ.ಎಸ್.ಜಿಲ್ಲಾ ಅಧ್ಯಕ್ಷ ಅಕ್ಷಿತ್ ಕುಮಾರ್, ಬಂಟ್ವಾಳ ಮಂಡಲದ ಕಾರ್ಯದರ್ಶಿಗಳಾದ ರವೀಶ್ ಶೆಟ್ಟಿ ಕರ್ಕಳ, ಬಿಜೆಪಿ ಪ್ರಮುಖರಾದ ತುಂಗಪ್ಪ ಬಂಗೇರ, ಪುಳಿಂಚ ಶ್ರೀಧರ್ ಶೆಟ್ಟಿ, ಕಮಲಾಕ್ಷಿ ಕೆ.ಪೂಜಾರಿ,ಸುಲೋಚನ ಜಿ.ಕೆ.ಭಟ್,ಪ್ರಭಾಕರ ಪ್ರಭು, ನಳಿನಿ ಶೆಟ್ಟಿ, ರವೀಂದ್ರ ಕಂಬಳಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ಸಂಚಾಲಕ ಮೋನಪ್ಪ ದೇವಸ್ಯ ಸ್ವಾಗತಿಸಿದರು.

ಮಂಡಲದ ಕಾರ್ಯದರ್ಶಿ ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು.ಸುರೇಶ್ ಕೋಟ್ಯಾನ್ ವಂದಿಸಿದರು.