ಡಾ ಟಿ.ಶ್ಯಾಮ್ ಭಟ್ ಸಾರಥ್ಯದ ಸಂಪಾಜೆ ಯಕ್ಷೋತ್ಸವಕ್ಕೆ ಚಾಲನೆ ; ಇಂದು ಮುಂಜಾನೆಯಿಂದ ನಾಳೆ ಮುಂಜಾನೆವರೆಗೂ ನಡೆಯುವ ಯಕ್ಷಜಾತ್ರೆಗೆ ಸಾಕ್ಷಿಯಾಗುತ್ತಿದೆ ಅಡ್ಯಾರ್ ಗಾರ್ಡನ್ – ಕಹಳೆ ನ್ಯೂಸ್
ಮಂಗಳೂರು : ” ಸಂಪಾಜೆ ಯಕ್ಷೋತ್ಸವ ” ಯಕ್ಷಗಾನ ಲೋಕಕ್ಕೆ ಹೊಸ ರೀತಿಯ ಅನೇಕ ಆಯಾಮವನ್ನು ಪರಿಚಯಿಸಿದ ಅತ್ಯುನ್ನತ ಕಾರ್ಯಕ್ರಮ. ಯಕ್ಷಗಾನ ರಂಗಕ್ಕೆ ಅಪಾರವಾದ ಕಾಣಿಕೆಯನ್ನು ನೀಡಿದ ಕೊಡು ಗೈ ದಾನಿ ಡಾ. ಟಿ ಶ್ಯಾಮ್ ಭಟ್ ಸಾರಥ್ಯದಲ್ಲಿ ನಡೆಯುವ ಯಕ್ಷೋತ್ಸವಕ್ಕೆ ಈ ಭಾರಿ ಮಾತ್ರ ಅಡ್ಯಾರ್ ಗಾರ್ಡನ್ ಸಾಕ್ಷಿಯಾಗುತ್ತಿದೆ.
ಇಂದು ಮುಂಜಾನೆಯಿಂದ ನಾಳೆ ಮುಂಜಾನೆವರೆಗೂ ಯಕ್ಷಜಾತ್ರೆ
ಇಂದು ಮುಂಜಾನೆ 10 ಘಂಟೆಗೆ ಯಕ್ಷೋತ್ಸವಕ್ಕೆ ಚಾಲನೆದೊರೆತ್ತಿದ್ದು, ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು ರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು, ಎಡನೀರು ಶ್ರೀಗಳು, ಸುಬ್ರಹ್ಮಣ್ಯ ಶ್ರೀಗಳು, ಒಡಿಯೂರು ಶ್ರೀಗಳು ಭಾಗಹಿಸಲಿದ್ದಾರೆ.
ಇಲ್ಲಿದೆ ಆಮಂತ್ರಣ :