Recent Posts

Sunday, January 19, 2025
ಸುದ್ದಿ

ವಧುವಿನಂತೆ ಸಿಂಗಾರಗೊಂಡು ಹಾಸ್ಟೆಲ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ– ಕಹಳೆ ನ್ಯೂಸ್

ಯುವಕ ಕೈಗಳಿಗೆ ಹಸಿರು ಬಳೆಗಳನ್ನು ತೊಟ್ಟು, ಮದುವನಗಿತ್ತಿಯಂತೆ ಸಿಂಗಾರಗೊಂಡು ಹಾಸ್ಟೆಲ್​​ನ ತನ್ನ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾನೆ. ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವೇನು ಎನ್ನುವುದೇ ಪೊಲೀಸರಿಗೆ ಅರ್ಥವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪುನೀತ್‌ನ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿವಿಲ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 21 ವರ್ಷದ ಯುವಕ ಪುನೀತ್ ದುಬೆ ಇಂದೋರ್‌ನ ಹಾಸ್ಟೆಲ್ ಕೊಠಡಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಯುವಕ ಕೈಗಳಿಗೆ ಹಸಿರು ಬಳೆಗಳನ್ನು ತೊಟ್ಟು, ಮದುವನಗಿತ್ತಿಯಂತೆ ಸಿಂಗಾರಗೊಂಡು ಹಾಸ್ಟೆಲ್​​ನ ತನ್ನ ಕೊಠಡಿಯಲ್ಲಿರುವ ಸೀಲಿಂಗ್ ಫ್ಯಾನ್‌ಗೆ ಹಾಕಿಕೊಂಡಿದ್ದಾನೆ. ಯುವಕನ ಮೃತದೇಹ ಕಂಡ ಪೋಷಕರು ಇದು ಕೊಲೆ ಎನ್ನುವ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಕೊಲೆಯೋ? ಆತ್ಮಹತ್ಯೆಯೋ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಕಂಡು ಹಾಸ್ಟೆಲ್​​​ ಸಿಬ್ಬಂದಿಗೆ ಕರೆ ಮಾಡಿದ್ದು, ಭನ್ವಾರ್ಕುವಾನ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಬಂದಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಸಿಂಗಾರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕೇಸ್‌ ಚರ್ಚೆಗೆ ಕಾರಣವಾಗಿದ್ದು, ವಿದ್ಯಾರ್ಥಿಯ ಆತ್ಮಹತ್ಯೆಗೆ ಕಾರಣವೇನು ಎನ್ನುವುದೇ ಪೊಲೀಸರಿಗೆ ಅರ್ಥವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡನೇ ವರ್ಷದ ಬಿಎಸ್ಸಿ ಓದುತ್ತಿರುವ ವಿದ್ಯಾರ್ಥಿ ಪುನೀತ್, ಇಂದೋರ್‌ನ ರಂಜಿತ್ ಸಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ, ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದ (MPPSC) ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಪತ್ತೆಯಾದಾಗ ಶವದ ಬಳಿ ನೆಲದ ಮೇಲೆ ರಕ್ತದ ಮಡುವಿತ್ತು. ಪುನೀತ್ ಸಾವನ್ನು ಆತ್ಮಹತ್ಯೆ ಮತ್ತು ಕೊಲೆ ಕೋನ ಎರಡರಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ರಾಜ್ಯದ ಉದಯಪುರ ಪಟ್ಟಣದವರಾದ ಪುನೀತ್, ಎರಡು ವರ್ಷಗಳ ಹಿಂದೆ ತಮ್ಮ ಅಧ್ಯಯನಕ್ಕಾಗಿ ಇಂದೋರ್‌ಗೆ ಸ್ಥಳಾಂತರಗೊಂಡಿದ್ದ ಎಂದು ಅವರ ತಂದೆ ತ್ರಿಭುವನ್ ದುಬೆ ಬಹಿರಂಗಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪುನೀತ್‌ನ ಲ್ಯಾಪ್‌ಟಾಪ್, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಸದ್ಯ ಆತನ ಹಾಸ್ಟೆಲ್ ರೂಂ ಮೇಟ್‌ಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.