Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ನೆಕ್ಕಿಲಾಡಿ ತಡೆಗೋಡೆ ಕುಸಿತ : ಶಾಸಕ ಅಶೋಕ್ ರೈಯವರಿಂದ ಪರಿಶೀಲನೆ !– ಕಹಳೆ ನ್ಯೂಸ್

ಪುತ್ತೂರು: ಭಾರೀ ಮಳೆಗೆ ಪುತ್ತೂರು ಉಪ್ಪಿನಂಗಡಿ ರಸ್ತೆಯ‌ ನೆಕ್ಕಿಲಾಡಿಯ ಆದರ್ಶ ನಗರದಲ್ಲಿ ನೂತನವಾಗಿ ನಿರ್ಮಾಣವಾದ ತಡೆ ಗೋಡೆ ಕುಸಿತಕ್ಕೊಳಗಾಗಿದೆ. ರಸ್ತೆ ಅಗಲೀಕರಣದ ವೇಳೆ ನಿರ್ಮಾಣವಾದ ಈ ತಡೆ ಗೋಡೆ ಪ್ರಥಮ ಮಳೆಗೆ ಕುಸಿತಕ್ಕೊಳಗಾಗಿದೆ. ಘಟನಾ ಸ್ಥಳಕ್ಕೆ ಶಾಸಕರಾಸ ಅಶೋಕ್ ರೈಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಇಂಜಿನಿಯರನ್ನು ಕರೆಸಿದ ಶಾಸಕರು ಗುಣಮಟ್ಟದ ತಡೆ ಗೋಡೆ ನಿರ್ಮಾಣ ಮಾಡುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರ.ಕಾಯದರ್ಶಿ ಎಂ ಎಸ್ ಮಹಮ್ಮದ್, ನೆಕ್ಕಿಲಾಡಿ ವಲಯಾಧ್ಯಕ್ಷರಾದ ಅನಿಮಿನೇಜಸ್, ಮುಖಂಡರಾದ ಯುನಿಕ್ ಅಬ್ದುಲ್ ರಹಿಮಾನ್, ರಮಾನಾಥ ವಿಟ್ಲ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು