ಬಿಸಿರೋಡಿನ ಸರ್ವೀಸ್ ಬಸ್ ನಿಲ್ದಾಣದಲ್ಲಿ ಕೆಸರು ಮತ್ತು ನೀರು ತುಂಬಿ ನಡೆದಾಡಲು ಸಂಕಷ್ಟ ಪಡುವ ಪ್ರಯಾಣಿಕರು – ಕಹಳೆ ನ್ಯುಸ್
ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಿಸಿರೋಡಿನ ಸರ್ವೀಸ್ ಬಸ್ ನಿಲ್ದಾಣದಲ್ಲಿ ಕೆಸರು ಮತ್ತು ನೀರು ತುಂಬಿಕೊಂಡಿದ್ದ ಪ್ರಯಾಣಿಕರು ನಡೆದಾಡಲು ಸಂಕಷ್ಟ ಪಡುವ ಸ್ಥಿತಿ ದೃಶ್ಯ ಕಂಡು ಬಂದಿದೆ.
ಮಂಗಳೂರಿಗೆ ಹೋಗುವ ಜನರಿಗೆ ನಿಲ್ಲಲು ಸರ್ವೀಸ್ ರಸ್ತೆಯಲ್ಲಿ ನಿರ್ಮಿಸಿದ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಸರು ತುಂಬಿಕೊಂಡಿದೆ. ಹಳೆಯ ತಾಲೂಕು ಕಚೇರಿಯ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣ ಮಾಡಲಾಗಿರುವ ರಸ್ತೆಯ ಮಣ್ಣು ಮಳೆಯ ನೀರಿನ ಜೊತೆ ಸರ್ವೀಸ್ ರಸ್ತೆಗೆ ಬಂದು ನಿಂತಿದೆ.
ಇದೀಗ ಸರ್ವೀಸ್ ರಸ್ತೆ ತುಂಬಾ ಕೆಸರು ತುಂಬಿ ಕೊಂಡಿದ್ದು ಗದ್ದೆಯಂತಾಗಿದೆ.
ಮಳೆಯ ನೀರು ಸರಿಯಾಗಿ ಹರಿದುಹೋಗಲು ವ್ಯವಸ್ಥೆಯಿಲ್ಲದ ಸರ್ವೀಸ್ ರಸ್ತೆಯಲ್ಲಿ ಇದೀಗ ಕೆಸರಿನ ಸಮಸ್ಯೆ ಸಾರ್ವಜನಿಕರಿಗೆ ತೊಂದರೆ ನೀಡಿದೆ.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ರಸ್ತೆಯಲ್ಲಿ ತುಂಬಿರುವ ಕೆಸರನ್ನು ತೆಗೆಯುವ ಮೂಲಕ ಸಾರ್ವಜನಿಕ ಆಗಿರುವ ಸಮಸ್ಯೆಯನ್ನು ಪರಿಹರಿಸಲು ಮನವಿ ಮಾಡಿದ್ದಾರೆ