Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮೇ.25ರಂದು ಪುತ್ತೂರಿನ ಪ್ರತಿಷ್ಠಿತ ಎಸ್.ಆರ್.ಕೆ ಲ್ಯಾಡರ್ಸ್ ನ ರಜತ ಸಂಭ್ರಮ – ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಕೃಷಿಕ ಮಿತ್ರ ಎಸ್.ಆರ್.ಕೆ ಲ್ಯಾಡರ್ಸ್ ನ 25ನೇ ವರ್ಷದ ರಜತ ಸಂಭ್ರಮವು ಕಡಬ ತಾಲೂಕಿನ ಕೊಯಿಲ ಕಲಾಯಿಗುತ್ತಿನಲ್ಲಿ ಮೇ.25ರಂದು ನಡೆಯಲಿದೆ.

ಮಧ್ಯಾಹ್ನ 2ರಿಂದ ಬಿಳಿನೆಲೆಯ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯವರಿಂದ ನೃತ್ಯ ಭಜನೆ, 2.30ರಿಂದ ಮಂಗಳೂರಿನ ಶಬರಿ ಸಿಂಗಾರಿ ಮೇಳ ಚೆಂಡೆ ತಂಡದಿಂದ ಚೆಂಡೆ ಕುಣಿತ, ಹಾಗೂ ಸರಿಗಮಪ ಖ್ಯಾತಿಯ ಪ್ರಜ್ಞಾ ಮರಾಠೆ ಮತ್ತು ಸಮನ್ವಿ ರೈ ಪುತ್ತೂರು ಇವರಿಂದ ಸುಮಧುರ ಗಾಯನ ನಡೆಯಲಿದ್ದು, ಬಳಿಕ ಟ್ಯಾಲೆಂಟೆಡ್ ಡ್ಯಾನ್ಸ್ ಡೈರೆಕ್ಟರ್ ಯಶ್ವಿನ್ ದೇವಾಡಿಗ ಇವರ ತಂಡದವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತದನಂತರ ಸಂಜೆ 4ರಿಂದ ಬೆಂಗಳೂರಿನ ರಿಚರ್ಡ್ ಲೂಯಿಸ್, ಮಿಮಿಕ್ರಿ ಗೋಪಿ ಇವರ ತಂಡದವರಿಂದ ಹಾಸ್ಯ ಸಂಜೆ, ತುಳು ಯಕ್ಷತೆಲಿಕೆ ಹಾಗೂ ತೆಂಕತಿಟ್ಟು ತಂಡದವರಿಂದ ಯಕ್ಷಸಂಜೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ ಎಸ್.ಆರ್.ಕೆ ಲ್ಯಾಡರ್ಸ್ ನ ಮಾಲಕ ಕೇಶವ ಅಮೈ ಅವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಸಭಾ ಹಾಗೂ ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಗೌರವಾನ್ವಿತ ಸಭಾಧ್ಯಕ್ಷ ಯು. ಟಿ. ಖಾದರ್, ಸುಳ್ಯ ವಿಧಾನಸಭಾ ಕ್ಷೇತ್ರ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಳ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ವಿಧಾನಸಭಾ ಕ್ಷೇತ್ರ ನಿಕಟ ಪೂರ್ವ ಶಾಸಕ ಸಂಜೀವ ಮಠಂದೂರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಐ.ಎ.ಎಸ್, ಮಂಗಳೂರಿನ ಪೊಲೀಸ್ ಅಧೀಕ್ಷಕ ಸಿಬಿ ರಿಶ್ಯಂತ್ ಐಪಿಎಸ್, ಮಂಗಳೂರು ವೃತ್ತ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಗೋಕುಲ್‍ದಾಸ್, ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ ಹೆಚ್., ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಬಿ., ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊಯಿಲ ಉಪ ನಿರ್ದೇಶಕ ಪ್ರಸನ್ನ ಕುಮಾರ್ ಹೆಬ್ಬಾರ್, ಮಂಗಳೂರಿನ ವೀನು ಲ್ಯಾಡರ್ಸ್ ಮಾಲಕ ವಿನೋದ್ ಎಂ. ಕೆರ್ಲೇಕರ್, ದಿ ತೋಟಗಾರ್ಸ್ ಕೋ – ಅಪರೇಟಿವ್ ಸೇಲ್ಸ್ ಸೊಸೈಟಿ ಕಮಿಟೆಡ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಕಡಬ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಸುರೇಶ್ ಬೈಲು, ಬರೆಪ್ಪಾಡಿಯ ಅದಿಶಕ್ತಿ ಲ್ಯಾಡರ್ಸ್ ನ ಮಾಲಕ ಚಂದ್ರಶೇಖರ್ ಕೆ., ಹಾಗೂ ಮತ್ತಿತ್ತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.