ದೆಹಲಿ: ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಇಳಿಕೆಯ ಹಿನ್ನೆಲೆಯಲ್ಲಿ ದೇಶೀಯ ತೈಲ ದರದಲ್ಲೂ ಕೂಡ ಇಳಿಕೆಯಾಗುತ್ತಿದೆ. ಶುಕ್ರವಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‍ಗೆ 80.85 ರೂ. ಹಾಗೂ ಡೀಸೆಲ್ ದರ ಲೀಟರ್‍ಗೆ 74.73 ರೂ. ಗಳಷ್ಟು ಇತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರುಗತಿಯಲ್ಲಿದ್ದು, ಕಳೆದ ಒಂದು ವಾರದಿಂದ ಪೆಟ್ರೋಲ್ ದರದಲ್ಲಿ ಎಂಟು ದಿನಗಳಲ್ಲಿ ಪೆಟ್ರೋಲ್ ಬೆಲೆ 1.98 ರೂ. ಮತ್ತು ಡೀಸೆಲ್‍ಗೆ 0.96 ರೂ. ಇಳಿಕೆಯಾಗಿದೆ.
ದರ ಇಳಿಕೆಯ ಟ್ರೆಂಡ್ ಇನ್ನಷ್ಟು ದಿನ ಮುಂದುವರಿಯುವ ನಿರೀಕ್ಷೆಯಿದೆ ಎನ್ನಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಬೆಲೆ ಏರಿಕೆ ಬಿಸಿಯಲ್ಲಿದ್ದ ವಾಹನ ಮಾಲೀಕರು ಕೊಂಚ ದಿವಸಗಳ ಕಾಲ ನೆಮ್ಮದಿಯಿಂದ ಇರಬಹುದಾಗಿದೆ.