Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿರಾಜಕೀಯರಾಜ್ಯಸುದ್ದಿ

‘ ಬಂದ ದಾರಿಗೆ ಸುಂಕ‌ ಇಲ್ಲ ‘ ಶಾಸಕ ಹರೀಶ್ ಪೂಂಜ ಪರ ರಾಜ್ಯಾದ್ಯಂತ ಧ್ವನಿ ಎತ್ತಿದ ಕಾರ್ಯಕರ್ತರ ಪವರ್ ನೋಡಿ ಪೋಲೀಸ್ ಇಲಾಖೆ ಕಂಗಾಲು ; ಪೂಂಜ ಬಂಧನ ನಿರ್ಧಾರ ವಾಪಸ್ಸು – ಕಹಳೆ ನ್ಯೂಸ್

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರನ್ನು ಬಂಧನ ಮಾಡದೇ ನಿವಾಸದಿಂದ ಪೊಲೀಸರು ನಿರ್ಗಮಿಸಿದ್ದಾರೆ.‌

ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಿ ಪೊಲೀಸರು ಶಾಸಕರ ಗರ್ಡಾಡಿಯಲ್ಲಿರುವ ಖಾಸಗಿ ನಿವಾಸದಿಂದ ವಾಪಸ್ ತೆರಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಮಧ್ಯಾಹ್ನದಿಂದಲೂ ಶಾಸಕರ ನಿವಾಸದಲ್ಲಿ ನಡೆಯುತ್ತಿದ್ದ ಹೈಡ್ರಾಮಾ ಅಂತ್ಯವಾಗಿದ್ದು, ವಿಚಾರಣೆಗೆ ಹಾಜರಾಗಲು ಶಾಸಕ ಹರೀಶ್ ಪೂಂಜ ಐದು ದಿನಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ತನಿಖಾಧಿಕಾರಿಯೂ ಆಗಿರುವ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಜಿ. ಸುಬ್ಬಾಪೂರ್ ಮಠ್ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು.

ಆದರೆ ಶಾಸಕರ ನಿವಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ಮತ್ತು ಪೊಲೀಸರು ಸೇರಿದ್ದ ಕಾರಣ ಬಂಧನದ ಸಾಧ್ಯತೆ ಎಂದು ಹೇಳಲಾಗಿತ್ತು.

ಆದರೆ ಕೊನೆಗೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ತಿಳಿಸಿ ಪೊಲೀಸರು ಶಾಸಕ ಪೂಂಜ ನಿವಾಸದಿಂದ ವಾಪಸ್ ತೆರಳಿದ್ದಾರೆ.