Recent Posts

Sunday, January 19, 2025
ಸುದ್ದಿ

ಮೀಟೂ ಆರೋಪ: ಮಾಡಲಿಂಗ್ ಕ್ಷೇತ್ರದ ಆರಂಭಿಕ ಕರಾಳ ದಿನ ಮುಂದಿಟ್ಟ ಪೂನಂ ಪಾಂಡೆ – ಕಹಳೆ ನ್ಯೂಸ್

ಬೆಂಗಳೂರು: ಮೀಟೂ ಆರೋಪ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲ ಬಾಲಿವುಡ್ ನಲ್ಲಿಯೂ ಜೋರಾಗಿ ಕೇಳಿಬರುತ್ತಿದೆ. ಇದೀಗ ಬಾಲಿವುಡ್ ನ ಹಾಟ್ ಬೆಡಗಿ ಪೂನಂ ಪಾಂಡೆ ಕೂಡ ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಹಂಚಿಕೊಂಡಿದ್ದಾರೆ.

ಯಾವಾಗಲೂ ಹಾಟ್ ಅವತಾರದಲ್ಲೇ ಸುದ್ದಿಯಾಗುತ್ತಿರುವ ನಟಿ ಪೂನಂಪಾಂಡೆ ಮಾಡಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ತಾವು ಅನುಭವಿಸಿದ ಕರಾಳ ದಿನವನ್ನು ಎಲ್ಲರ ಮುಂದಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಸಹ ಆಯೋಜಕನೊಬ್ಬ ನನ್ನಿಂದ ಬೇರೆಯದನ್ನೇ ಬಯಸಿದ್ದೆ. ಆತ ಒಂದು ದಿನ ನನ್ನ ರೂಮಿಗೆ ಬಂದು ಪರೋಕ್ಷವಾಗಿ ಅದರ ಬಗ್ಗೆ ಮಾತನಾಡಿದ. ನನಗೆ ಆತನ ಅಂತರಾಳ ಅರ್ಥವಾಯಿತು.

ನಾನು ಅಷ್ಟೇ ನಯವಾಗಿ ಆತನಿಗೆ ಉತ್ತರಿಸಿದೆ. ಇಲ್ಲಿಂದ ಪೊಲೀಸ್ ಠಾಣೆಗೆ ಐದು ನಿಮಿಷದ ದಾರಿ, ನೀನು ನನ್ನ ಜತೆ ಬರ್ತಿಯಾ ಎಂದು ಕೇಳಿದೆ. ನನ್ನ ಪ್ರಶ್ನೆಗೆ ತಬ್ಬಿಬ್ಬಾದ ಆ ಮನುಷ್ಯ ರೂಮ್ ನಿಂದ ಕಾಲ್ಕಿತ್ತ ಎಂದು ಪೂನಂ ಹೇಳಿಕೊಂಡಿದ್ದಾರೆ.