Saturday, November 23, 2024
ಉಡುಪಿಸುದ್ದಿ

ರಾಜಕೀಯ ಹಿನ್ನೆಲೆ ಉಳ್ಳವರು ಸ್ಪರ್ಧಿಸಿ ಗೆದ್ದು ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಮಲೀನಗೊಳಿಸಿದ್ದಾರೆ: ಡಾ.ಅರುಣ್ ಹೊಸಕೊಪ್ಪ ಆರೋಪ- ಕಹಳೆ ನ್ಯೂಸ್

ಉಡುಪಿ : ಕಳೆದ ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿರುವವರು ರಾಜಕೀಯ ಹಿನ್ನೆಲೆ ಉಳ್ಳವರು. ಅವರು ಈ ಕ್ಷೇತ್ರವನ್ನು ಮಲೀನಗೊಳಿಸಿದ್ದೂ ಅಲ್ಲದೇ, ಶಿಕ್ಷಕರಿಗೆ ಪಾರ್ಟಿಗಳನ್ನು, ಉಡುಗೊರೆಗಳನ್ನು ನೀಡಿ, ಹಣ ಹಂಚಿ ಪ್ರಜ್ಞಾವಂತ ಮತದಾರರನ್ನು ಭ್ರಷ್ಟಗೊಳಿಸಿದ್ದಾರೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ಅರುಣ್ ಹೊಸಕೊಪ್ಪ ಆರೋಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ಪ್ರತಿನಿಧಿಸಲು ಸ್ಪರ್ಧಿಸುವವರಿಗೂ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ಅನುಭವ ಇರಬೇಕು. ನಾನು ಇತಿಹಾಸ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದು ಸರಕಾರಿ, ಅನುದಾನಿತ, ಖಾಸಗಿ ಕಾಲೇಜುಗಳಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಕ್ಷೇತ್ರದ ಆರು ಜಿಲ್ಲೆಗಳ ವ್ಯಾಪ್ತಿಯಲ್ಲಿ 3000ಕ್ಕೂ ಅಧಿಕ ಶಾಲಾ- ಕಾಲೇಜುಗಳಲ್ಲಿ 1700ಕ್ಕೂ ಅಧಿಕ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಭೇಟಿಯಾಗಿ ಚರ್ಚಿಸಿದ್ದೇನೆ. ಶಿಕ್ಷಕನಾಗಿದ್ದು, ಅವರ ಸಮಸ್ಯೆ, ಬೇಡಿಕೆಗಳ ಅರಿವಿರುವವರು ಗೆದ್ದರೆ ಸಮಸ್ಯೆ ಗಳನ್ನು ಬಗೆಹರಿಸಲು ಸಾಧ್ಯವಿದೆ. ಹೀಗಾಗಿ ಅದ್ಯಾಪನದಲ್ಲಿ ಅನುಭವ ಇರುವವರನ್ನೇ ಈ ಬಾರಿ ಆಯ್ಕೆ ಮಾಡಿ ಎಂದು‌ ಮನವಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು