Sunday, January 19, 2025
ಕ್ರೀಡೆಬೆಂಗಳೂರುಸಿನಿಮಾಸುದ್ದಿ

RCB ಗೆದ್ದರೆ ಬಿಕಿನಿ ಫೋಟೋ ಹಂಚಿಕೊಳ್ತೀನಿ ಎಂದಿದ್ದ ಹನಿ ರೋಸ್‌, ಈಗ ಒಡೆದ ಹೃದಯ! – ಕಹಳೆ ನ್ಯೂಸ್

ಅಹಮದಾಬಾದ್‌: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ನಡೆದ ಎಲಿಮಿನೇಟರ್-1‌ (Eliminator) ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ಗೆದ್ದರೆ, ಬಿಕಿನಿ ಫೋಟೋ ಪೋಸ್ಟ್‌ ಮಾಡುತ್ತೇನೆ ಎಂದು ಹೇಳಿದ್ದ ಸೌತ್‌ನ ಹಾಟ್‌ ಬ್ಯೂಟಿ ಹನಿ ರೋಸ್‌ (Honey Rose) ಈಗ ಒಡೆದ ಹೃದಯದ ಎಮೋಜಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜಸ್ಥಾನ್‌ ರಾಯಲ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಹನಿ ರೋಸ್‌, ಆರ್‌ಸಿಬಿ ಗೆದ್ದರೆ ನಾನು ಪಂದ್ಯದ ನಂತರ ನನ್ನ ಬಿಕಿನಿ ಚಿತ್ರವನ್ನು ಪೋಸ್ಟ್ ಮಾಡುತ್ತೇನೆ. ʻAAARRRRR CEEEEE BEEEEE!!!!!!!!ʼ ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದರು. ಆರ್‌ಸಿಬಿ ಪಂದ್ಯದ ಸೋಲಿನ ಬಳಿಕ ʻಆರ್‌ಸಿಬಿ ಎಂಬ ಹೆಸರಿನೊಂದಿಗೆʼ ಮೂರು ಒಡೆದ ಹೃದಯದ ಎಮೋಜಿಯನ್ನ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿಯ ಪೋಸ್ಟ್‌ಗೆ ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ʻಸದ್ಯ ಆ ದೇವರು ನಮ್ಮನ್ನು ಬದುಕಿಸಿದ ಅಂತ ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಒಂದೇ ಒಂದು ಫೋಟೋವನ್ನಾದರೂ ಪೋಸ್ಟ್‌ ಅಂತ ಕೇಳಿಕೊಂಡಿದ್ದಾರೆ.

ಸೌಂದರ್ಯಕ್ಕೆ ಮತ್ತೊಂದು ಹೆಸರಾಗಿರುವ ಹಾಟ್‌ ಬ್ಯೂಟಿ ಹನಿ ರೋಸ್‌, ಇವರು ಮಾಡಿದ ಸಿನಿಮಾಗಳಿಗಿಂತ (Honey Rose Cinema) ಇವರ ಹಾಟ್ ಹಾಟ್ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿವೆ. ಮಾನ್ಸ್ಟರ್‌, ಬಿಗ್ ಬ್ರದರ್, ವೀರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ನಾಯಕಿಯಾಗಿ ಹನಿ ರೋಸ್ ನಟಿಸಿದ್ದಾರೆ. ಮೋಹನ್ ಲಾಲ್, ಬಾಲಯ್ಯ ಅವರಂತಹ ದಿಗ್ಗಜ ನಟರಿಗೆ ನಾಯಕಿಯಾಗಿ ಮೋಡಿ ಮಾಡಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್‌ನ ಎಲಿಮಿನೇಟ್‌-1 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, 8 ವಿಕೆಟ್‌ ನಷ್ಟಕ್ಕೆ 172 ರನ್‌ ಗಳಿಸಿತ್ತು. 173 ರನ್‌ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ (Rajasthan Royals) ಇನ್ನು 6 ಎಸೆತ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 174 ರನ್‌ ಹೊಡೆದು ಜಯ ಸಾಧಿಸಿತು.