Saturday, November 23, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೋಳಂತೂರು ಒಕ್ಕೂಟದ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ- ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಬೋಳಂತೂರು ಒಕ್ಕೂಟದ ಧರ್ಮನಿಧಿ ಒಕ್ಕೂಟದ ಸದಸ್ಯೆ ಸೀತಾ ಅವರ ಪತಿ ರಾಮಚಂದ್ರ ಆಚಾರ್ಯರವರ ವೈದ್ಯಕೀಯ ಚಿಕಿತ್ಸೆಗೆ ಯೋಜನೆಯ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಅಡಿಯಲ್ಲಿ ರೂ.85,000/- ಮಂಜುರಾಗಿದ್ದು, ಅದರ ಚೆಕ್ಕನ್ನು ವಿಟ್ಲ ತಾಲೂಕು ಯೋಜನಾಧಿಕಾರಿ ರಮೇಶ್ ರವರು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ವಿಟ್ಲ ಯೋಜನಾ ಕಚೇರಿಯ ಆಡಳಿತ ಪ್ರಬಂಧಕರಾದ ವಾಣಿ, ಹಣಕಾಸು ಪ್ರಬಂಧಕರಾದ ರತ್ನಾವತಿ. ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು