Tuesday, January 21, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಬಂಟ್ವಾಳ:ಸಿಡಿಲು ಬಡಿತಕ್ಕೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ವ್ಯಕ್ತಿ– ಕಹಳೆ ನ್ಯೂಸ್

ಬಂಟ್ವಾಳ: ವಿದ್ಯುತ್ ಪರಿವರ್ತಕದ ಬಳಿ ನಿಂತುಕೊಂಡಿದ್ದ ವ್ಯಕ್ತಿಯೋರ್ವನಿಗೆ ಸಿಡಿಲು ಬಡಿದು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ‌ಪೋಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇರಾ ಗ್ರಾಮದ ಮುರ್ಕಾಜೆ ನಿವಾಸಿ ಸತೀಶ್ ಚೌಟ (43) ಮೃತಪಟ್ಟ ವ್ಯಕ್ತಿ.‌‌‌‌‌ ಸತೀಶ್ ‌ಅವರು ಬಾಕ್ರಬೈಲಿನಲ್ಲಿ ಮರದ ಮಿಲ್ ನಲ್ಲಿ ಕೆಲಸಗಾರನಾಗಿದ್ದು, ಇಂದು ಬೆಳಿಗ್ಗೆ ಕೆಲಸಕ್ಕೆ ತೆರಳುವ ಉದ್ದೇಶದಿಂದ ರಸ್ತೆಯ ಬದಿಯಲ್ಲಿ ಟ್ರಾನ್ಸ್ ಪಾರ್ಮರ್ ಪಕ್ಕದಲ್ಲಿ ನಿಂತುಕೊಂಡಿರುವ ಸಮಯದಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು , ಒಮ್ಮೆಲೇ ವಿದ್ಯುತ್ ಪ್ರವೇಶಿಸಿ ಮೃತಪಟ್ಟ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು