ಉಡುಪಿ:ಸೇವಾಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯಲ್ಲಿ ಶಿಕ್ಷಕರಿಗೆ ವಿಷಯಾಧಾರಿತ ಪುನಶ್ಚೇತನ ಹ್ಯಾಪಿ ಲರ್ನಿಂಗ್ , ತರಗತಿ ಸಂವಹನ ಕಾರ್ಯಗಾರ- ಕಹಳೆ ನ್ಯೂಸ್
ಉಡುಪಿ :ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಶಿಕ್ಷಕರಿಗೆ ಆಯೋಜಿಸಿದ ಹ್ಯಾಪಿ ಲರ್ನಿಂಗ್ , ತರಗತಿ ಸಂವಹನ ಕಾರ್ಯಗಾರದಲ್ಲಿ ನಿಮಗೆ ಮೂರು ರೀತಿಯಲ್ಲಿ ತರಬೇತಿ ನೀಡುವುದಕ್ಕೆ ನಾನು ಸಮರ್ಥನಾಗಿದ್ದೇನೆ .
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದವನಾದ ನಾನು ನನ್ನ ಈ ವ್ಯಕ್ತಿತ್ವವನ್ನ ಬೆಳೆಸಿರುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ .
ನಾನು ನಿತ್ಯ ಶಾಖೆಗೆ ಹೋಗುತ್ತಿದ್ದೆ .ಬಾಲ್ಯದಿಂದಲೂ ಸಂಘದ ಒಡನಾಟ ಇರುವುದರಿಂದ ನನ್ನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗೋದಕ್ಕೆ ಸಾಧ್ಯವಾಯಿತು. ಇವತ್ತಿನ ರಾಜೇಂದ್ರ ಭಟ್ ಆಗಿರುವುದಕ್ಕೆ ಮುಖ್ಯ ಕಾರಣ ಸಂಘದ ಸಂಪರ್ಕ. ಇವತ್ತು ಜ್ಞಾನವನ್ನು ಪಡೆದಿರುವುದು ಮತ್ತು ಜ್ಞಾನವನ್ನು ಹಂಚಲು ಮುಖ್ಯ ಕಾರಣ ಮತ್ತು ಪ್ರೇರಣೆ ರಾಷ್ಟೀಯ ಸ್ವಯಂಸೇವಕ ಸಂಘ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಕಾರ್ಕಳದ ಶ್ರೀ ರಾಜೇಂದ್ರ ಭಟ್ ಕಾರ್ಯಾಗಾರದ ಆಶಯ ನುಡಿಯಲ್ಲಿ ಮಾತನಾಡಿದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಸಹಯೋಗದೊಂದಿಗೆ
ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಆಶ್ರಯದಲ್ಲಿ ನಡೆದ ಶಿಕ್ಷಕರಿಗೆ ವಿಷಯಧಾರಿತ ಪುನಶ್ಚೇತನ ಕಾರ್ಯಗಾರ ಹ್ಯಾಪಿ ಲರ್ನಿಂಗ್ – ತರಗತಿ ಸಂವಹನ ಕಾರ್ಯಗಾರ ಸೇವಾಸಂಗಮ ವಿದ್ಯಾಕೇಂದ್ರ ತೆಕ್ಕಟ್ಟೆ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಗಾರದ ಅಧ್ಯಕ್ಷತೆಯನ್ನು ಸೇವಾ ಸಂಗಮ ವಿದ್ಯಾ ಕೇಂದ್ರದ ಆಡಳಿತ ಮಂಡಳಿಯ ಅಧ್ಯಕ್ಷರು ಶ್ರೀ ಸುರೇಶ ಬೆಟ್ಟಿನ್ ವಹಿಸಿದ್ದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಅಧ್ಯಕ್ಷರು ಶ್ರೀಯುತ .ಪಾಂಡುರAಗ ಪೈ , ಸಿದ್ದಾಪುರ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಕಾರ್ಯಗಾರದ ವೇದಿಕೆಯಲ್ಲಿ ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಗೌರವ ಅಧ್ಯಕ್ಷರು ಶ್ರೀ .ಸಂಜೀವ ಗುಂಡ್ಮಿ , ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಕಾರ್ಯದರ್ಶಿ ಶ್ರೀಯುತ ಕಮಲಾಕ್ಷ ಪೈ , ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಶ್ರೀ .ಮಹೇಶ್ ಹೈಕಾಡಿ , ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಮುಖ್ಯೋಪಾಧ್ಯಾಯರು ಶ್ರೀ. ವಿಷ್ಣು ಮೂರ್ತಿ ಭಟ್, ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಉಪಾಧ್ಯಕ್ಷರು ಶ್ರೀ ಅರುಣ ಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಒಟ್ಟು 115 ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀಯುತ ರಾಜೇಂದ್ರ ಭಟ್ ಕಾರ್ಕಳ ಇವರು ಮೂರು ಅವಧಿ ಗಳಲ್ಲಿ ತರಗತಿ ಸಂವಹನ ಸಂಬAಧಿಸಿದ ವಿಚಾರಗಳನ್ನು ಚಟುವಟಿಕೆ ಆಧಾರಿತ ರೂಪದಲ್ಲಿ ತರಬೇತಿಯನ್ನು ನೀಡಿದರು.
ಕಾರ್ಯಗಾರದಲ್ಲಿ ಪ್ರಾಸ್ತಾವಿಕ ನುಡಿಯನ್ನು ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಗೌರವ ಕಾರ್ಯದರ್ಶಿ ಶ್ರೀಯುತ ಸಂಜೀವ್ ಗುಂಡ್ಮಿ ಯವರು ಮಾಡಿದರು.ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆಯ ಮಾತಾಜಿ ಶ್ರೀಮತಿ ಸಂಧ್ಯಾ ಭಟ್ ವಂದಿಸಿದರು
.
ಕಾರ್ಯಕ್ರಮ ನಿರೂಪಣೆ ಶ್ರೀಮತಿ ಶಕೀಲಾ ಮಾತಾಜಿ ನಿರ್ವಹಿಸಿದರು.