ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ (ರಿ.) ಪೆರಾಜೆ ಇವರ ವತಿಯಿಂದ ಜೂ.1ರಂದು ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಏಕಾಹ ಭಜನೆ- ಕಹಳೆ ನ್ಯೂಸ್
ಬಂಟ್ವಾಳ: ವಿಷ್ಣುಮೂರ್ತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ (ರಿ.) ಪೆರಾಜೆ ಇವರ ವತಿಯಿಂದ ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜೂ.1ರಂದು ಏಕಹಾ ಭಜನೆ ನಡೆಯಲಿದೆ.
ಪೆರಾಜೆ ವಿಷ್ಣುಮೂರ್ತಿ ದೇವಸ್ಥಾನದ ನವೀಕರಣದ ನಿಮಿತ್ತ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಶ್ರೀ ವಿಷ್ಣುಮೂರ್ತಿ ದೇವರಿಗೆ ಏಕಾಹ ಭಜನೆಯನ್ನು ನಡೆಸುವ ಸಂಕಲ್ಪ ಮಾಡಿದ್ದು ಜೂನ್ 1 ರಂದು ಶನಿವಾರ ಸೂರ್ಯಾಸ್ತದಿಂದ ಜೂನ್ 2 ರ ಆದಿತ್ಯವಾರ ಸೂರ್ಯಾಸ್ತದವರೆಗೆ ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸನ್ನಿಧಿಯಲ್ಲಿ ಭಜನಾ ಸಂಕೀರ್ತನೆ ಜರುಗಲಿದೆ .
ಭಜನಾ ಸೇವೆ ನಡೆಸಿಕೊಡುವ ಭಜನಾ ಮಂಡಳಿಗಳ ವಿವರ
ಜೂ.1ರ ಸಂಜೆ 6.30 ರಿಂದ ರಾತ್ರಿ 8.00ರವೆಗೆ ಪೆರಾಜೆ ಶ್ರೀದೇವಿ ಚಿಣ್ಣರ ಕುಣಿತ ಭಜನಾ ಬಳಗದವರಿಂಗ ಮೊದಲ್ಗೊಂಡು ರಾತ್ರಿ 8.00 ರಿಂದ 9.30ರವೆಗೆ ನೇರಳಕಟ್ಟೆಯ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದವರಿಂದ ಹಾಗೂ 9.30 -11.00ರವೆಗೆ ಪೆರಾಜೆಯ ಶ್ರೀ ಅಯ್ಯಪ್ಪ ಭಕ್ತವೃಂದ ಕೊಡಂಗೆ, 11.00 -12.30 ಶ್ರೀ ವನದುರ್ಗ ಯುವ ಕೇಸರಿ ಭಜನಾ ಬಳಗ ಗಡಿಯಾರ, 12.30- 2.00 ಬ್ರಹ್ಮಶ್ರೀ ನಾರಾಯಣ ಗುರು ಭಜನಾ ಬಳಗ ಮಾಣಿ, 2.00-3.30 ಶ್ರೀ ಅಯ್ಯಪ್ಪ ಭಕ್ತವೃಂದ ಮಂಡಲ ಪೆರಾಜೆಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.
ಜೂ.2ರ ಮರುದಿನ ಬೆಳಿಗ್ಗೆ 3.30- 5.00ವರೆಗೆ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆರಾಜೆ, 5.00 -6.30 ಶ್ರೀದೇವಿ ಭಜನಾ ಮಂಡಳಿ ಬೊಳ್ಳುಕಲ್ಲು ಪೆರಾಜೆ, 6.30-8.00 ಶ್ರೀ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕರಿಂಕ ಅನಂತಾಡಿ ಹಾಗೂ 8.00 -9.30 ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಾಣಿ, 09.30ರಿಂದ 11.00 ಶ್ರೀ ಭ್ರಾಮರಿ ಬಂಟ ಭಜನಾ ಮಂಡಳಿ ಮಾಣಿ, 11.00-12.30 ಶ್ರೀದೇವಿ ಭಜನಾ ಮಂದಿರ ಕೆದಿಲ ಹಾಗೂ 12.30-2.00ಮಹಿಳಾ ಮಂಡಳಿ ಶ್ರೀ ಕ್ಷೇತ್ರ ಧ.ಗ್ರಾ ಯೋಜನೆ ಪೆರಾಜೆ ಒಕ್ಕೂಟ ಸ್ತ್ರೀ ಶಕ್ತಿ ಸಂಘಗಳು ಮಹಾಲಕ್ಷ್ಮಿ ಸೇವಾ ಮಹಿಳಾ ಸಮಿತಿ ಪೆರಾಜೆಯವರಿಂದ ಭಜನೆ ನಡೆಯಲಿದೆ.
ಮಧ್ಯಾಹ್ನ 2.00- 3.30 ಶ್ರೀ ಸರಸ್ವತಿ ಭಜನಾ ಬಳಗ ಕಾಗೆಕಾನ, ಸಂಜೆ 3.30-5.00 ಧೂಮಾವತಿ ಮಲರಾಯ ಭಜನಾ ಬಳಗ ಕೆದಿಲ, ಸಂಜೆ 5.00- 6.30 ಕಾನಲ್ತಾಯ ಮಹಾಕಾಳಿ ಭಜನಾ ಮಂಡಳಿ ಕಲ್ಲೇಟಿ ಬರಿಮಾರು, 6.30- 6.52 ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ದೇವಿ ಭಜನಾ ಮಂಡಳಿ ಪೆರಾಜೆಯವರಿಂದ ಭಜನಾ ಮಂಗಳೋತ್ಸವ ನಡೆಯಲಿದೆ.
ಏಕಾಹ ಭಜನೆಯ ಮಂಗಳೋತ್ಸವದ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಪೆರಾಜೆ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ಚಿಣ್ಣರ ಕುಣಿತ ಭಜನಾ ಬಳಗದ ವಿದ್ಯಾರ್ಥಿಗಳಿಗೆ “ವಿದ್ಯಾನಿಧಿ” ವಿತರಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಟ್ಲ ಸರಕಾರಿ ಪ್ರೌಢಶಾಲೆಯ ಅಧ್ಯಾಪಕ ಸದಾಶಿವ ನಾಯಕ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಊರ ಪರವೂರ ಬಂಧುಗಳು ಉಪಸ್ಥಿತರಿದ್ದು, ಚಿಣ್ಣರ ಕುಣಿತ ಭಜನಾ ಬಳಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಹರಸಬೇಕೆಂದು ಈ ಮೂಲಕ ಚಿಣ್ಣರ ಕುಣಿತ ಭಜನಾ ಬಳಗದ ಸಂಚಾಲಕರು ಮತ್ತು ಪೋಷಕರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಲಕ್ಷ್ಮೀಶ ಪೆರಾಜೆ ಇವರನ್ನು ಸಂಪರ್ಕ ಮಾಡುವಂತೆ ತಿಳಿಸಲಾಗಿದೆ. ಮೊ 9480172159