Friday, April 11, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಮರೀಲ್ ಕಾಡಮನೆ ನಿವಾಸಿ ಆಟೋ ರಿಕ್ಷಾ ಚಾಲಕರೊಬ್ಬರ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ-ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಮರೀಲ್ ಕಾಡಮನೆ ನಿವಾಸಿ ಆಟೋ ರಿಕ್ಷಾ ಚಾಲಕರೊಬ್ಬರ ಪತ್ನಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 28ರಂದು ಬೆಳಕಿಗೆ ಬಂದಿದೆ.
ಆಟೋ ರಿಕ್ಷಾ ಚಾಲಕ, ಮೂಲತಃ ಜಾಲ್ಸೂರಿನ ಕುಕ್ಕಂದೂರಿನ ಮನೋಜ್ ಎಂಬವರ ಪತ್ನಿ ಸಂಧ್ಯಾ (45 ವ.) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಕಳೆದ 20 ವರ್ಷಗಳಿಂದ ಮನೋಜ್ ಅವರು ಪುತ್ತೂರಿನ ಮರೀಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

ಮೇ 27ರಂದು ರಾತ್ರಿ ರಿಕ್ಷಾದಲ್ಲಿ ಬಾಡಿಗೆ ಮಾಡಲು ಮನೆಯಿಂದ ತೆರಳಿದ್ದ ಮನೋಜ್, ಮೇ 28ರಂದು ಬೆಳಿಗ್ಗೆ ಮನೆಗೆ ಹೋದಾಗ ಪತ್ನಿ ಮನೆಯ ಹಾಲ್‌ನ ಕಿಟಕಿಗೆ ನೇಣು ಬಿಗಿದು ಅಸ್ವಸ್ಥ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಸಂಧ್ಯಾ ಅವರು ಮೃತಪಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ಪತಿ ಮನೋಜ್, ಪುತ್ರನನ್ನು ಅಗಲಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ